ಬೆಂಗಳೂರು: ಜನರೇ ಬದಲಾವಣೆ ಬಯಸಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜನರೇ ಬದಲಾವಣೆ ಬಯಸಿದ್ದಾರೆ. ನಮ್ಮ ರಾಜ್ಯದಿಂದ ಕಾರ್ಯಕ್ರಮಗಳು ಆರಂಭವಾಗಿವೆ. ಮುಂದೆ ಮಹಾರಾಷ್ಟ್ರ ಚುನಾವಣೆ ಇದೆ. ನಾವು ಜನರ ಪರ ಕಾರ್ಯಕ್ರಮ ಕೋಟ್ಟಿದ್ದೇವೆ. ಭಾವನೆ ಬೇಡ ಎಂದು ಬದುಕಿಗಾಗಿ ಕಾರ್ಯಕ್ರಮ ಕೊಟ್ಟಿದ್ದೇವೆ. ಜನರ ಭಾವನೆಯೇ ಇದು.
Advertisement
ನಾನು ಇದನ್ನು ಮುಂದಿನ ರಾಜ್ಯಗಳ ಚುನಾವಣೆಗೆ ದಿಕ್ಸೂಚಿ ಎಂದು ಹೇಳುತ್ತಿಲ್ಲ. ಬದಲಾವಣೆಯೇ ಬೆಳಕು ದೇಶದಲ್ಲಿ ಬದಲಾವಣೆ ಗಾಳಿ ಬೀಸಿದೆ ಎಂದು ಹೇಳಿದರು. ದೇಶದಲ್ಲಿ ಎಲ್ಲದಕ್ಕೂ ಒಂದೊಂದು ಕಾಲ ಇರುತ್ತೆ. 12 ವರ್ಷ ಎನ್‌ಡಿಎಗೆ ದೊಡ್ಡ ಅವಕಾಶ ಕೊಟ್ಟಿದ್ದಾರೆ. ಈಗ ಜನರು ಬದಲಾವಣೆ ಬಯಸಿದ್ದಾರೆ. ಅದರ ಫಲವಾಗಿ ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ ಎಂದರು.