ಬೆಂಗಳೂರು:- ನಡು ರಸ್ತೆಯಲ್ಲಿಯೇ ಎಲೆಕ್ಟ್ರಿಕ್ ಬೈಕ್ ಒಂದು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆ ಬಳಿಯಲ್ಲಿ ಇಂದು ಸಂಜೆ 6.30ರ ಸುಮಾರಿಗೆ ಜರುಗಿದೆ.
Advertisement
ಚಲಿಸುತ್ತಿದ್ದ ಬೈಕ್ ನಲ್ಲಿ ಮೊದಲಿಗೆ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತ ಬೈಕ್ ಸವಾರ, ಬೈಕ್ ನಿಂದ ಇಳಿದಿದ್ದಾನೆ. ಸವಾರ ಇಳಿಯುತ್ತಿದ್ದಂತೆ ನಡು ರಸ್ತೆಯಲ್ಲಿಯೇ ಬೈಕ್ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ.
ಕೂಡಲೇ ಸ್ಥಳಕ್ಕೆ ಕಾಮಾಕ್ಳಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.


