ಚಿಕ್ಕಬಳ್ಳಾಪುರ:- ವಿದ್ಯುತ್ ಶಾಕ್ ತಗುಲಿ 17 ವರ್ಷದ ಹುಡುಗ ದಾರುಣ ಸಾವನ್ನಪ್ಪಿದ ಘಟನೆ
ತಾಲೂಕಿನ ಕುರ್ಲಹಳ್ಳಿ ಗ್ರಾಮದಲ್ಲಿ ಜರುಗಿದೆ.
Advertisement
ಬಿಗ್ ಬಾಸ್ ಗೆ ಬಿಗ್ ಶಾಕ್: “ಶೋ” ರದ್ದು ಮಾಡುವಂತೆ ಕೋರ್ಟ್ ಮೆಟ್ಟಿಲೇರಿದ ವಕೀಲ, ತುರ್ತು ನೋಟಿಸ್ ಜಾರಿ!
ಯಶವಂತ್ ಮೃತ ದುರ್ದೈವಿ ಎನ್ನಲಾಗಿದೆ. ಅಂದಹಾಗೆ ತಂದೆ ತಾಯಿ ಕೂಲಿ ಕೆಲಸ ಮಾಡುವವರಾಗಿದ್ದು, ಹಳೆಯ ಮನೆ ಬಾಡಿಗೆಗೆ ಪಡೆದು ಅಲ್ಲಿಯೇ ಜೀವನ ನಡೆಸುತ್ತಿದ್ದರು.
ಮೃತ ಯಶ್ವಂತ್ ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡ್ತಿದ್ದ. ಇತ್ತೀಚೆಗೆ ಸುರಿದ ಮಳೆಗೆ ಮನೆಯ ಕಲ್ಲು ಚಪ್ಪಡಿಗಳ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಬಲ್ಬ್‌ಗೆ ಉರಿಯುತ್ತಿರಲಿಲ್ಲವಂತೆ. ಇದರಿಂದ ವಿದ್ಯುತ್ ಸಂಪರ್ಕ ಸರಿಮಾಡಲು ಯಶವಂತ್ ಕತ್ತರಿಯಿಂದ ವೈರ್ ಕಟ್ ಮಾಡುವಾಗ ಕರೆಂಟ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾನೆ. ಈ ವೇಳೆ ಅವಘಡ ಸಂಭವಿಸಿದೆ.