ರಾಯ್ಪುರ:- ಕಬಡ್ಡಿ ಪಂದ್ಯದ ವೇಳೆ ಬಿರುಗಾಳಿ ಬೀಸಿದ ಪರಿಣಾಮ ಟೆಂಟ್ಗೆ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿದ ಘಟನೆ ಛತ್ತೀಸ್ಗಢದ ಕೊಂಡಗಾಂವ್ ಜಿಲ್ಲೆಯಲ್ಲಿ ಜರುಗಿದೆ.
Advertisement
ಸತೀಶ್ ನೇತಮ್, ಶ್ಯಾಮ್ಲಾಲ್ ನೇತಮ್, ಸುನಿಲ್ ಶೋರಿ ಮೃತರು. ಶನಿವಾರ ರಾತ್ರಿ ಬಡೇರಾಜ್ಪುರ ಅಭಿವೃದ್ಧಿ ಬ್ಲಾಕ್ನ ರಾವಸ್ವಾಹಿ ಗ್ರಾಮದಲ್ಲಿ ಕಬಡ್ಡಿ ಪಂದ್ಯ ನಡೆಯುತ್ತಿರುವಾಗ ಈ ಅವಘಡ ಸಂಭವಿಸಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಗ್ರಾಮದಲ್ಲಿ ಶನಿವಾರ ಕಬ್ಬಡಿ ಪಂದ್ಯವನ್ನು ಆಯೋಜಿಸಲಾಗಿತ್ತು. ಅಲ್ಲದೇ ಪ್ರೇಕ್ಷಕರಿಗಾಗಿ ಟೆಂಟ್ ಅನ್ನು ನಿರ್ಮಿಸಲಾಗಿತ್ತು. ಪಂದ್ಯ ನಡೆಯುತ್ತಿದ್ದ ವೇಳೆ ಹಠಾತ್ ಬಿರುಗಾಳಿ ಬೀಸಿದ ಪರಿಣಾಮ ಟೆಂಟ್ನ ಕಬ್ಬಿಣದ ಕಂಬಕ್ಕೆ 11-ಕೆವಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.