ಹಾವೇರಿ:- ವಿದ್ಯುತ್ ಶಾರ್ಟ್ ಸರ್ಕ್ಯೂರ್ಟ್ನಿಂದ ಕೊಟ್ಟಿಗೆಯಲ್ಲಿದ್ದ 4 ಎಮ್ಮೆಗಳು ಸಾವನ್ನಪ್ಪಿದ್ದು, ಎರಡು ಎತ್ತುಗಳು ಗಾಯಗೊಂಡ ಘಟನೆ ಹಾವೇರಿ ತಾಲೂಕಿನ ಗುತ್ತಲ ಸಮೀಪದ ಕಂಚರಗಟ್ಟಿ ಗ್ರಾಮದಲ್ಲಿ ಜರುಗಿದೆ.
ಕಂಚರಗಟ್ಟಿ ಗ್ರಾಮದ ನಿವಾಸಿ ಅಣ್ಣಪ್ಪ ಎಂಬುವವರಿಗೆ ಸೇರಿದ ಕೊಟ್ಟಿಗೆ ಇದಾಗಿದ್ದು, ಕೊಟ್ಟಿಗೆಯಲ್ಲಿ ಅಳವಡಿಸಿದ್ದ ವಿದ್ಯುತ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಅಗ್ನಿ ಅವಘಡ ಸಂಭವಿಸಿದೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಬೆಂಕಿ ಅವಘಡದಿಂದ ರೈತ ಅಣ್ಣಪ್ಪನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಕಣ್ಣೀರು ಹಾಕಿದ್ದಾನೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



