HomeBengaluru NewsPower Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್​ ಪವರ್!

Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್​ ಪವರ್!

For Dai;y Updates Join Our whatsapp Group

Spread the love

ಬೆಂಗಳೂರು:- ಬೆಂಗಳೂರು ನಗರದ ಅನೇಕ ಪ್ರದೇಶಗಳಲ್ಲಿ ಇಂದು ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

KPTCLದಿಂದ ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿ ನಡೆಯುವ ಹಿನ್ನೆಲೆ, ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್​ ಕಡಿತವಾಗಲಿದೆ. ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಟ್​ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಜಯನಗರದ ಎಲಿಟಾ ವಾಯುವಿಹಾರ ಅಪಾರ್ಟ್‌ಮೆಂಟ್‌ಗಳು.ಕೆ.ಆರ್ ಲೇಔಟ್, ಶಾರದನಗರ, ಚುಂಚುಘಟ್ಟ ಮತ್ತು ಪ್ರದೇಶವನ್ನು ಸುತ್ತುವರಿದ ಉಪ ನಿಲ್ದಾಣದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಟಂಟೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ.

ರಾಜಾಜಿನಗರದ 3ನೇ ಮುಖ್ಯ. 4 ನೇ ಮುಖ್ಯ, 4 ನೇ ಬ್ಲಾಕ್, ರಾಜಾಜಿನಗರ, IST ಕ್ರಾಸ್, ಮತ್ತು 2ನೇ ಕ್ರಾಸ್, IST R ಬ್ಲಾಕ್, ರಾಜಾಜಿನಗರದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1:30ರವರೆಗೆ ಪವರ್​ ಕಟ್​ ಆಗಲಿದೆ.

ಕೋರಮಂಗಲದ ಗುರಪ್ಪ ರೆಡ್ಡಿ ಲೇಔಟ್, ಎಸ್​ ಪಾಳ್ಯದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ.

ಬೆಸ್ಕಾಂ ವ್ಯಾಪ್ತಿಯ ರಾಮನಗರದ PSV ನಗರ, ಯಾರಬನಗರ, ಕೋತಿಪುರ, ಮತ್ತು ಇತರೆ ಪ್ರದೇಶ, ದಾವಣಗೆರೆಯ ಅಲಗಾವಲ್, ಹಲವುದಾರ, ಓಬಳಾಪುರ, ಸಿದ್ದಾಪುರ, ಡಿ ಮದಕರಿಪೂರ್ಣ. ದೊಡ್ಡಿಗನಾಳ್ ಮತ್ತು ಕೋಲಾರದ ಮುತ್ತಕದಳ್ಳಿ, ಗುನ್ನಹಳ್ಳಿ, ಮಾಡಬಹಳ್ಳಿ, ನಾಯಂಡ್ರಹಳ್ಳಿ, ಕಾಲೋನಿ, ಚಾನಕೇಶವಪುರದಲ್ಲಿ ಬೆಳಗ್ಗೆ 10 ರಿಂದ ಸಂಜೆ 5:30ರವರೆಗೆ ವಿದ್ಯುತ್​ ಕಡಿತವಾಗಲಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!