ದಾವಣಗೆರೆ: ಟಿಸಿ ರಿಪೇರಿ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲ್ಲೂಕಿನ ಮಳಲ್ಕೆರೆಯಲ್ಲಿ ನಡೆದಿದೆ. ಮುತ್ತಪ್ಪ ಕರಮಡಿ (32) ಮೃತ ದುರ್ದೈವಿಯಾಗಿದ್ದು, ಇನ್ನು ಗಂಟೆ ಗಟ್ಟಲೇ ಟಿಸಿ ಮೇಲೆಯೇ ಮೃತದೇಹ ನೇತಾಡಿದ್ದು, ವಿದ್ಯುತ್ ತೆಗೆಯಲಾಗಿತ್ತಾ, ಇಲ್ಲವಾ ಎನ್ನುವುದು ಸಂಶಯಕ್ಕೆ ಕಾರಣವಾಗಿದೆ.
ಇದರ ಜೊತೆಗೆ ಎಲ್‌ಸಿ ತೆಗೆದುಕೊಂಡಿದ್ದರೂ ವಿದ್ಯುತ್ ಪ್ರವಹಿಸಿದ್ದು ಹೇಗೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದು, ಈ ಕುರಿತು ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ..
ಇನ್ನೂ ಗದಗ ಜಿಲ್ಲೆಯ ರೋಣ ತಾಲೂಕಿನ ಮೇಲ್ಮಠ ಮೂಲದ ಮುತ್ತಪ್ಪ ಕರಮಡಿ ಲೈನ್‌ಮ್ಯಾನ್ ಆಗಿ ಹತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ದಾವಣಗೆರೆ ತಾಲ್ಲೂಕಿನ ಬಾಡಾ ಗ್ರಾಮದಲ್ಲಿ ಪತ್ನಿ ಆಶಾ ಹಾಗೂ ಎರಡು ವರ್ಷದ ಹೆಣ್ಣು ಮಗುವಿನ ಜೊತೆ ವಾಸವಾಗಿದ್ದರು.
ಅದಲ್ಲದೆ ಪತ್ನಿ ಆಶಾ ಐದು ತಿಂಗಳ ಗರ್ಭಿಣಿ ಕೂಡ ಆಗಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಮುತ್ತಪ್ಪ ಸಾವನ್ನಪ್ಪಿರುವುದರಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.



