HomeIndia NewsJagannath Rath Yatra: ರಥಯಾತ್ರೆ ವೇಳೆ ನಿಯಂತ್ರಣ ಕಳೆದುಕೊಂಡು ಓಡಿದ ಆನೆ..! ಹಲವರಿಗೆ ಗಾಯ

Jagannath Rath Yatra: ರಥಯಾತ್ರೆ ವೇಳೆ ನಿಯಂತ್ರಣ ಕಳೆದುಕೊಂಡು ಓಡಿದ ಆನೆ..! ಹಲವರಿಗೆ ಗಾಯ

For Dai;y Updates Join Our whatsapp Group

Spread the love

ಗಾಂಧಿನಗರ: ಇಂದಿನಿಂದ ಪುರಿಯಲ್ಲಿ ಪ್ರಾರಂಭವಾಗುವ ಜಗನ್ನಾಥ ರಥಯಾತ್ರೆ 9 ದಿನಗಳ ಕಾಲ ನಡೆಯಲಿದೆ. ಜಗನ್ನಾಥ, ಬಲಭದ್ರ, ಮತ್ತು ಸುಭದ್ರೆಯ ವಿಗ್ರಹಗಳನ್ನು ರಥಗಳಲ್ಲಿ ಗುಂಡಿಚಾ ದೇಗುಲಕ್ಕೆ ಕೊಂಡೊಯ್ಯಲಾಗುತ್ತದೆ. ಈ ಐತಿಹಾಸಿಕ ಉತ್ಸವವು ಧರ್ಮ, ಸಂಸ್ಕೃತಿ, ಮತ್ತು ಸಾಮರಸ್ಯದ ಸಂಕೇತವಾಗಿದೆ. ಲಕ್ಷಾಂತರ ಭಕ್ತರು ಈ ಭಕ್ತಿಯ ಯಾತ್ರೆಯಲ್ಲಿ ಭಾಗವಹಿಸುತ್ತಾರೆ.

ಇನ್ನೂ ಈ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿರುವ ಘಟನೆ ನಡೆದಿದೆ. ಪರಿಣಾಮ ಇಬ್ಬರು ಭಕ್ತರು ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ 10:15 ರ ಸುಮಾರಿಗೆ ರಥಯಾತ್ರೆ ನಗರದ ಖಾದಿಯಾ ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆಯೊಂದು ಇದ್ದಕ್ಕಿದ್ದಂತೆ ಗುಂಪಿನಿಂದ ದೂರ ಸರಿದು ವಿರುದ್ಧ ದಿಕ್ಕಿನಲ್ಲಿ ಓಡಲು ಪ್ರಾರಂಭಿಸಿತು.

ಕಿರಿದಾದ ಬೀದಿಯಾದ್ದರಿಂದ ಜನರು ಭಯಭೀತರಾದರು. ಇದರ ಜೊತೆ ಇನ್ನೆರಡು ಆನೆಗಳು ಸಹ ಓಡಿದವು. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ನಂತರ ಮಾವತರು ಆನೆಗಳನ್ನು ನಿಯಂತ್ರಿಸಿದರು. ಆನೆಗಳನ್ನು ಕರೆದೊಯ್ದ ಬಳಿಕ ಮೆರವಣಿಗೆ ಮುಂದುವರಿಯಿತು. ಗಾಯಗೊಂಡಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಪುರುಷ ಭಕ್ತನನ್ನು ಚಿಕಿತ್ಸೆಗಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!