ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಹಾತ್ಮ ಗಾಂಧೀಜಿ ಅವರ ಜೀವನ, ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪಂ.ಪಂ. ಸದಸ್ಯ ಕೆ.ಎಲ್. ಕರಿಗೌಡರ ಹೇಳಿದರು.
ಅವರು ಪಟ್ಟಣದ ಮಾರುಕಟ್ಟೆಯಲ್ಲಿ ಗಾಂಧೀಜಿ ಜಯಂತಿ ಅಂಗವಾಗಿ ಗಾಂಧಿ ಪುತ್ಥಳಿ ಪ್ರತಿಷ್ಠಾಪಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿ, ಶಾಂತಿಯುತ ಹೋರಾಟ ಅವಿಸ್ಮರಣೀಯವಾದದ್ದು. ಅವರು ತಮ್ಮ ಜೀವನದುದ್ದಕ್ಕೂ ಸ್ವಚ್ಛತೆ, ಶಾಂತಿ, ಅಹಿಂಸಾ ತತ್ವಗಳನ್ನು ಪಾಲಿಸಿದವರು. ಅಂತಹ ಮಹನೀಯರ ತತ್ವಾದರ್ಶಗಳು ನಮಗೆ ಮಾದರಿಯಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದರು.
ಪಂ.ಪಂ. ಅಧ್ಯಕ್ಷೆ ಯಲ್ಲವ್ವ ಕವಲೂರ, ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಬಸವರಾಜ ಬಡ್ನಿ, ಪಿ.ಎ. ವಂಟಕರ, ಅಶೋಕ ಸೋನಗೋಜಿ, ಬಿ.ವಿ. ಸುಂಕಾಪೂರ, ರಾಮಣ್ಣ ಕಮಾಜಿ, ಮಾಹಾದೇವಪ್ಪ ವಿಜಾಪೂರ, ನಾಗರಾಜ ದೇಶಪಾಂಡೆ, ಬಸವರಾಜ ಹಾರೋಗೇರಿ, ಉಮಾ ಮಟ್ಟಿ, ಪಾರವ್ವ ಅಳ್ಳಣ್ಣವರ, ಮರಿಯಪ್ಪ ನಡಗೇರಿ, ಮಾಹಾದೇವಪ್ಪ ಗಡಾದ ಹಾಗೂ ಪಂ.ಪಂ. ಸರ್ವ ಸದಸ್ಯರು ಇದ್ದರು.