ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಇಲ್ಲಿನ ಹೊಳೆ ಆಲೂರ ಮಂಡಲದ ಮೆಣಸಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ದಿನದಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯವರೆಗೂ ಹಮ್ಮಿಕೊಂಡಿರುವ ಸೇವಾ ಪಾಕ್ಷಿಕ ಕಾರ್ಯಕ್ರಮದ ನಿಮಿತ್ತ ಮೆಣಸಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ನರಗುಂದದ ಯುವ ನಾಯಕ ಉಮೇಶಗೌಡ ಸಿ. ಪಾಟೀಲ ನೆರವೇರಿಸಿದರು.

Advertisement

ಈ ಸಂದರ್ಭ ಮಾತನಾಡಿದ ಅವರು, ದೇಶಪ್ರೇಮ ಎಲ್ಲರಲ್ಲಿಯೂ ಇರಬೇಕು. ನರೇಂದ್ರ ಮೋದಿಯವರಲ್ಲಿ ಇರುವ ದೇಶಪ್ರೇಮ, ಬಡವರ ಕಲ್ಯಾಣ, ಸಾಮಾಜಿಕ ಸೇವೆಯಂತಹ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದರು.

ಹೊಳೆ ಆಲೂರ ಮಂಡಲ ಬಿಜೆಪಿ ಅಧ್ಯಕ್ಷ ಸೋಮು ಬಿ. ಚರೇದ, ಮುತ್ತಣ್ಣ ಜಂಗಣ್ಣವರ, ಅಶೋಕ ಹೆಬ್ಬಳ್ಳಿ, ಜಿ. ಪಂ ಮಾಜಿ ಸದಸ್ಯ ಶಿವುಕುಮಾರ ನೀಲಗುಂದ, ಬಿಜೆಪಿ ಮುಖಂಡರಾದ ಸೋಮನಗೌಡ ಹುದೇಡಮನಿ, ಸುರೇಶ ಗುರಮ್ಮನವರ, ಎಸ್‌ಡಿಎಂಸಿ ಅಧ್ಯಕ್ಷ ಹಿರೇಗೌಡ್ರ, ಪುಂಡಲೀಕ ಮಾದರ, ಚಂದ್ರು ಬದಾಮಿ, ಭೀಮನಗೌಡ ಹಿರೇಗೌಡರ ಸೇರಿದಂತೆ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಿಜೆಪಿ ಮುಖಂಡರಾದ ಕೇದಾರಗೌಡ ಮಣ್ಣೂರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here