HomeGadag Newsಕಾಂಗ್ರೆಸ್ ದೇಶದ ಹೆಸರು ಕೆಡಿಸಿದೆ : ಲಿಂಗರಾಜ ಪಾಟೀಲ

ಕಾಂಗ್ರೆಸ್ ದೇಶದ ಹೆಸರು ಕೆಡಿಸಿದೆ : ಲಿಂಗರಾಜ ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅಂದಿನ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನದ ವಿರುದ್ಧವಾಗಿ ಏಕಪಕ್ಷೀಯ ನಿರ್ಣಯವನ್ನು ತೆಗೆದುಕೊಂಡು 21 ತಿಂಗಳವರೆಗೆ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರಿ ಅದರ ವಿರುದ್ಧ ಹೋರಾಡುವವರನ್ನು ಜೈಲಿಗೆ ಕಳಿಸುವ ಹೀನ ಕೃತ್ಯ ಮಾಡಿದರು.

ಅಂದಿನ ಸರ್ವಾಧಿಕಾರಿ ಪ್ರಧಾನಿಮಂತ್ರಿ ಇಂದಿರಾ ಗಾಂಧಿ ದೇಶದ ಜನರಿಗೆ ಹಾಗೂ ನಮ್ಮ ದೇಶದ ಹೆಸರನ್ನು ಕೆಡಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಹೇಳಿದರು.

ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ನಗರ ಮಂಡಲ ವತಿಯಿಂದ ನಗರದ ಗಾಂಧಿ ಸರ್ಕಲ್‌ನಲ್ಲಿ ತುರ್ತು ಪರಿಸ್ಥಿತಿಯ ದಿನವನ್ನು ಕೈಗೆ ಕಪ್ಪು ಬಟ್ಟೆ ಧರಿಸಿ, ಗೊಡೆಗಳಿಗೆ ಭಿತ್ತಿಪತ್ರಗಳನ್ನ ಅಂಟಿಸಿ, ಜನರಿಗೆ ತಿಳಿ ಹೇಳುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆದರೆ ಅಂದು ತುರ್ತು ಪರಿಸ್ಥಿತಿಯ ವಿರುದ್ಧ ಪ್ರತಿಭಟಿಸಿರುವ ಇಂದಿನ ಮುಖ್ಯಮಂತ್ರಿ ಸಿದ್ದಮಯ್ಯನವರು ಇಂದು ಅದೇ ಪಕ್ಷದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರಿಗೆ, ಕಾರ್ಯಕರ್ತರಿಗೆ ಇಲ್ಲ. ನರೇಂದ್ರ ಮೋದಿಯವರು ಸಂವಿಧಾನವನ್ನು ಗೌರವಿಸುವುದರೊಂದಿಗೆ 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ದೇಶ ಸೇವೆಯನ್ನು ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೊಷ ಅಕ್ಕಿ, ನಗರ ಅಧ್ಯಕ್ಷ ವೆಂಕಟೇಶ ಹಬೀಬ, ನವೀನ ಕೊಟೆಕಲ್, ಗದಗ ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ, ಪ್ರಮುಖರಾದ ಶ್ರೀಪತಿ ಉಡುಪಿ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿಗಳಾದ ಸುಧೀರ ಕಾಟಿಗರ, ಗಂಗಾಧರ ಹಬೀಬ, ನಿರ್ಮಲಾ ಕೊಳ್ಳಿ, ವಿಜಯಲಕ್ಷ್ಮಿ ಮಾನ್ವಿ, ಇರ್ಷಾದ ಮಾನ್ವಿ, ಅಶೋಕ ಸಂಕಣ್ಣವರ, ಸುರೇಶ ಚಿತ್ತರಗಿ, ಅಶೋಕ ಕುಡತಿನಿ, ಲಕ್ಷ್ಮಿ ಶಂಕರ ಕಾಕಿ, ವಸಂತ ಹಬೀಬ, ಕೇಶವ ಕೊಟ್ನಿಕಲ್, ಕಾರ್ತಿಕ್ ಶಿಗ್ಲಿಮಠ, ಜಯಶ್ರೀ ಅಣ್ಣಿಗೇರಿ, ಅವಿನಾಶ ಹೊನಗುಡಿ, ಗಣೇಶ ಪರಾಪೂರ, ಪದ್ಮಾ ಮುತ್ತಲದಿನ್ನಿ, ಚಂದ್ರು ತಡಸದ, ಮಂಜು ಬಾಗೂರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಭಾರತದ ರಾಜಕೀಯ ಇತಿಹಾಸದಲ್ಲಿ ತಾವು ಗೆದ್ದ ಸಂದರ್ಭದಲ್ಲಿ ಕನಿಷ್ಠ 100-120 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಈಗ ಕಾಂಗ್ರೆಸ್‌ನವರು ಸಂವಿಧಾನದ ಮೇಲೆ ಎಂದೂ ಇಲ್ಲದ ಪ್ರೇಮವನ್ನು ತೋರುತ್ತಿದ್ದಾರೆ. 60 ವರ್ಷ ಆಳಿದ ಕಾಂಗ್ರೆಸ್ ಸರ್ಕಾರ ಯಾವೊಂದು ಅಭಿವೃದ್ಧಿ ಕಾರ್ಯಕ್ಕಾಗಲಿ, ಬಡಜನರ ಹಿತ ಕಾಯುವುದಾಗಲಿ ಮಾಡದೆ, ಅಧಿಕಾರ ದಾಹಕ್ಕಾಗಿ ವಿನಾಕಾರಣ ಆಡಳಿತ ಪಕ್ಷದ ಮೇಲೆ ದೂಷಿಸುತ್ತ ಆರೋಪವನ್ನು ಮಾಡುತ್ತಿದೆ ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!