ಮಹಿಳೆಯರು ನಾಲ್ಕು ಗೋಡೆ ಮಧ್ಯದಲ್ಲಿ ಸಮಾಜದ ಕಟ್ಟುಪಾಡುಗಳಿಗೆ ಜೋತು ಬಿದ್ದು ಸ್ವಾವಲಂಬಿಯಾಗಿ ಓಡಾಡದೇ ಮನೆಯಲ್ಲಿ ಇರುವ ದಿನಗಳನ್ನು ಹಲವಾರು ವರ್ಷಗಳಿಂದ ನಮ್ಮ ಮನೆಯ ಸುತ್ತಮುತ್ತಲಿನ ಪುರುಷ ಪ್ರಧಾನ ಸಮಾಜದಲ್ಲಿ ನೋಡುತ್ತಾ ಬಂದಿದ್ದೇವೆ.
ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತದೆ. ಶಕ್ತಿ ಯೋಜನೆಯನ್ನು 2023ರ ಜೂನ್ 11ರಂದು ಜಾರಿಗೆ ತರಲಾಯಿತು. ಇದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಕರ ಸಂಖ್ಯೆ ಗಗನಕ್ಕೇರಿದೆ.
ಭಾರತವು ಪುರುಷ ಪ್ರಧಾನ ದೇಶವಾಗಿದ್ದು, ಈ ಹಿಂದೆ ಮಹಿಳೆಯರಿಗೆ ಅಷ್ಟಾಗಿ ಆರ್ಥಿಕ ಸ್ವಾತಂತ್ರ್ಯವಿರಲಿಲ್ಲ. ತಮ್ಮ ತವರು ಮನೆಗೆ ಅಥವಾ ತಾವು ಹೋಗಲು ಬಯಸುವ ಪ್ರದೇಶಕ್ಕೆ ಹೋಗಲು ಸಾಧ್ಯವಾಗದೆ ಇರುವ ಎಷ್ಟೋ ಮಹಿಳೆಯರು ಇದ್ದಾರೆ. ಹಾಗಿರುವಾಗ ಈಗ ಮಹಿಳೆಯರು ಉಚಿತವಾಗಿ ಪ್ರಯಾಣ ಸೌಲಭ್ಯದ ಸದುಪಯೋಗ ಪಡೆಯುತ್ತಿದ್ದಾರೆ.
ಸಾಮಾನ್ಯ ಕುಟುಂಬದ ಮಹಿಳೆಯರು ಯಾವುದೇ ಟಿಕೇಟ್ ದರವನ್ನು ಭರಿಸದೇ ಉಚಿತವಾಗಿ ಪ್ರಯಾಣಿಸಲು ಅನುಕೂಲವಾಗುತ್ತಿದೆ. ಶಾಲಾ-ಕಾಲೇಜು ವಿಧ್ಯಾರ್ಥಿನಿಯರು ವಿಧ್ಯಾರ್ಥಿ ಪಾಸುಗಳನ್ನು ಪಡೆಯದೆ ಉಚಿತವಾಗಿ ಪ್ರಯಾಣಿಸಿ ವಿಧ್ಯಾಭ್ಯಾಸವನ್ನು ಪಡೆಯಲು ಅನುಕೂಲವಾಗಿರುತ್ತದೆ. ಬಡ ಕುಟುಂಬದ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಪ್ರಯಾಣ ದರವನ್ನು ಉಳಿತಾಯ ಮಾಡಿ ತಮ್ಮ ವಿಧ್ಯಾಭ್ಯಾಸಕ್ಕೆ ಬಳಿಸಿಕೊಳ್ಳಲು ಅನುಕೂಲವಾಗಿರುತ್ತದೆ. ಮಹಿಳೆಯರು ಪ್ರಯಾಣಿಸುವಾಗ ಭರಿಸುತ್ತಿದ್ದ ಹಣವನ್ನು ಉಳಿತಾಯ ಮಾಡಿ ಬೇರೆ ಕೆಲಸಗಳಿಗೆ ಬಳಸಿಕೊಳ್ಳಲು ಅನುಕೂಲವಾಗಿರುತ್ತದೆ. ಮಹಿಳಾ ಪ್ರಯಾಣಿಕರು ಕರ್ನಾಟಕದ ಎಲ್ಲಾ ಪ್ರವಾಸಿ ತಾಣಗಳಿಗೆ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಲು ಅನುಕೂಲವಾಗಿರುತ್ತದೆ. ರಾಜ್ಯದ ಮಹಿಳೆಯರ ಪೈಕಿ ಶೇ. 60ರಷ್ಟು ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿರುತ್ತಾರೆ. ಸಾಮಾನ್ಯ ಕುಟುಂಬದ ಮಹಿಳೆಯರು ದೂರ ಮಾರ್ಗಗಳಿಗೆ ಪ್ರಯಾಣಿಸಲು ಅನುಕೂಲವಾಗಿರುತ್ತದೆ. ಗ್ರಾಮಾಂತರ ಪ್ರದೇಶದ ಮಹಿಳೆಯರು ಬೇರೆ ಬೇರೆ ನಗರಗಳಿಗೆ ಹೋಗಿ ಉದ್ಯೋಗ ಮಾಡಲು ಅನುಕೂಲವಾಗಿರುತ್ತದೆ.
ಮದುವೇ ಮುಂಜಿ ಇನ್ನಿತರೆ ಸಮಾರಂಭಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ಶಕ್ತಿ ಯೋಜನೆ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಹೆಚ್ಚು ಉಪಯುಕ್ತವಾಗಿದೆ. ಗದಗ ಜಿಲ್ಲೆಯಲ್ಲಿ 11-06-2023ರಿಂದ 18-02-2025ರವರೆಗೆ 8,72,96,642 ಮಹಿಳೆಯರು ಶಕ್ತಿ ಯೋಜನೆಯ ಸೌಲಭ್ಯ ಪಡೆದಿದ್ದಾರೆ.
ರಾಜ್ಯದಲ್ಲಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಸಮಾಜದಲ್ಲಿನ ಧನಾತ್ಮಕ ಬದಲಾವಣೆ ಆಗುತ್ತಿವೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಎಸ್.ಆರ್. ಮೆಹರೊಜ್ ಖಾನ್ ಹೇಳಿದಂತೆ, 5 ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ರಾಜ್ಯದ ನಾಲ್ಕುವರೆ ಕೋಟಿ ಜನರು ಪಡೆದುಕೊಳ್ಳತ್ತಿದ್ದಾರೆ. ಶೇ. 98ರಷ್ಟು ಗುರಿ ಸಾಧಿಸಲಾಗಿದೆ ಎಂದೂ ತಿಳಿಸುತ್ತಾರೆ.
ಮಹಿಳೆಯರು ಉಳಿಸುತ್ತಿರುವ ಹಣವನ್ನು ಬಳಕೆ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದು, ಇದು ಸರಕಾರದ ಆದಾಯವಾಗಿ ಪರಿಣಮಿಸುತ್ತದೆ ಎಂದು ಅಧ್ಯಯನವು ತಿಳಿಸಿದೆ. ಪಂಚ ಗ್ಯಾರಂಟಿಗಳಲ್ಲಿ ಕರ್ನಾಟಕದ ಬಡ-ಮಧ್ಯಮ ಮಹಿಳೆರಿಗೆ `ಶಕ್ತಿ ಯೋಜನೆ’ ಮಹಿಳಾ ಕಾರ್ಮಿಕರು, ಮಹಿಳಾ ವ್ಯಾಪಾರಸ್ಥರು, ಕಾಯಿಪಲ್ಯ ಮಾರುವವರು ವಲಸೆ ಮಹಿಳಾ ಕಾರ್ಮಿಕರು, ರೈತ ಮಹಿಳೆಯರು ಗ್ರಾಮದಿಂದ ಸಿಟಿ ಮಾರ್ಕೆಟ್‌ಗೆ ಬರುವವರು ಸಣ್ಣ ಪ್ರಮಾಣದ ವಸ್ತುಗಳ ವ್ಯಾಪಾರ ಮಾಡುವರು ಈ ಯೋಜನೆಯಿಂದ ಸಂತಸ ವ್ಯಕ್ತಪಡಿಸುತ್ತಾರೆ.
ಬಡ, ಮಧ್ಯಮವರ್ಗದ ಕುಟುಂಬಕ್ಕೆ 1-2 ಸಾವಿರ ಮಾಸಿಕವಾಗಿ ಉಳಿತಾಯವಾದರೂ ಕೂಡಾ ಅದು ಅತೀ ದೊಡ್ಡ ಮೊತ್ತವೇ ಆಗುತ್ತದೆ. ಅದರಲ್ಲೂ ಒಂದು ಕುಟುಂಬದಲ್ಲಿ ವಿದ್ಯಾರ್ಥಿನಿಯರು ಇದ್ದರೆ, ಅವರ ಶಾಲಾ ಓಡಾಟದ ಖರ್ಚು ಉಳಿತಾಯವಾಗಲಿದೆ. ಅದು ವಿದ್ಯಾರ್ಥಿನಿಯ ಒಟ್ಟು ಶಿಕ್ಷಣದ ವೆಚ್ಚದಲ್ಲಿ ಕಡಿಮೆಯಾಗಲು ಸಹಾಯಕವಾಗಲಿದೆ.
ಕರ್ನಾಟಕದ ಜಿಎಸ್ಟಿ ಸಂಗ್ರಹಕ್ಕೆ ಕೊಡುಗೆ ನೀಡುತ್ತಿದೆ ಮತ್ತು ಕಾರ್ಮಿಕ ಬಲದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿದೆ ಎಂದು ಸರಕಾರಿ ಸ್ವಾಮ್ಯದ ಹಣಕಾಸು ನೀತಿ ಸಂಸ್ಥೆ ನಡೆಸಿದ ಅಧ್ಯಯನವು ತಿಳಿಸಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ‘ಶಕ್ತಿ ಯೋಜನೆ’ಯು ಹೆಚ್ಚಿನ ಮಹಿಳೆಯರು ಉದ್ಯೋಗ ಚಟುವಟಿಕೆಗಳಲ್ಲಿ ಭಾಗವಹಿಸಲು ಕೊಡುಗೆ ನೀಡುತ್ತಿದೆ.
– ರಾಘವೇಂದ್ರ ಶಾಂತಗೇರಿ.
ಅಪ್ರೆಂಟಿಸ್, ವಾರ್ತಾ ಇಲಾಖೆ-ಗದಗ.
ಬಡಜನರ ಬದುಕಿನಲ್ಲಿ ಬದಲಾವಣೆ ತರುವ ಯೋಜನೆಗಳು ಪಂಚ ಗ್ಯಾರಂಟಿ ಯೋಜನೆಗಳಾಗಿವೆ. ಗ್ಯಾರಂಟಿ ಸಮಿತಿ ಸದಸ್ಯರು ಅಧಿಕಾರಿಗಳು ಸಮರ್ಪಕ ಅನುಷ್ಠಾನ ಮಾಡುವ ಮೂಲಕ ಬಡವರ ಬದುಕು ಬಂಗಾರವಾಗಿಸಿ.
– ಡಾ. ಎಚ್.ಕೆ. ಪಾಟೀಲ.
ಗದಗ ಜಿಲ್ಲಾ ಉಸ್ತುವಾರಿ ಸಚಿವರು.
ಹಿಂದುಳಿದ, ಪ.ಜಾ ಮತ್ತು ಪ.ಪಂಗಡ, ಅಲ್ಪಸಂಖ್ಯಾತರ, ಮಹಿಳೆಯರು ಮತ್ತು ಮಕ್ಕಳಿಗಾಗಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅನುಷ್ಠಾನಿತ ಯೋಜನೆಗಳ ಸೌಕರ್ಯ ಅರ್ಹರಿಗೆ ತಲುಪುತ್ತಿದೆ. ತಾಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ವಿತರಣೆಗೆ ಸಮಸ್ಯೆಗಳೇನಾದರೂ ಇದ್ದಲ್ಲಿ ತಾಲೂಕಾ ಅಧ್ಯಕ್ಷರ ಗಮನಕ್ಕೆ ತರಬೇಕು.
– ಬಿ.ಬಿ. ಅಸೂಟಿ.
ಅಧ್ಯಕ್ಷರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ.