ಸರ್ಕಾರಿ ಶಾಲೆಗಳ ಸಬಲೀಕರಣ ಅತ್ಯಗತ್ಯ: ಇನ್ನರ್‌ವ್ಹೀಲ್ ಡಿಸ್ಟ್ರಿಕ್ಟ್ ಚೇರಮನ್ ಜ್ಯೋತಿ ಕಿರಣ್ ದಾಸ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶತಮಾನೋತ್ಸವ ಸಂಭ್ರಮದಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲಾ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳ ಸ್ಪೂರ್ತಿಗಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಗದಗ-ಬೆಟಗೇರಿ ಇನ್ನರವ್ಹೀಲ್ ಕ್ಲಬ್ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಿದೆ ಎಂದು ಇನ್ನರ್‌ವ್ಹೀಲ್ ಡಿಸ್ಟ್ರಿಕ್ಟ್ ಚೇರಮನ್ ಜ್ಯೋತಿ ಕಿರಣ್ ದಾಸ್ ಹೇಳಿದರು.

Advertisement

ಅವರು ಗದಗ-ಬೆಟಗೇರಿ ಇನ್ನರವ್ಹೀಲ್ ಕ್ಲಬ್‌ನ್ ದತ್ತು ಶಾಲೆಯಾದ ಗದುಗಿನ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 1ರಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಿ `ಹ್ಯಾಪಿ ಸ್ಕೂಲ್’ ಎಂದು ಘೋಷಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳ ಮಕ್ಕಳು ಪಾಠದೊಂದಿಗೆ ಬದುಕಿನ ನಿಜ ಅರಿವನ್ನು ತಿಳಿದುಕೊಳ್ಳುತ್ತಾರೆ. ಪುರಾತನವಾದ ಸರ್ಕಾರಿ ಶಾಲೆಗಳು ಅನೇಕ ಮಹಾನ್ ವ್ಯಕ್ತಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿವೆ. ಈ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ಗದಗ-ಬೆಟಗೇರಿ ಇನ್ನರವ್ಹೀಲ್ ಕ್ಲಬ್ ಶಾಲೆಯನ್ನು ದತ್ತು ಪಡೆದು ಮಕ್ಕಳಿಗೆ ಸಾಧನಾ ಸಲಕರಣೆಗಳನ್ನು ವಿತರಿಸಿ ಶಾಲಾಭಿವೃದ್ಧಿಗೆ ಕೈಜೋಡಿಸಿದೆ ಎಂದರು.

ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ್ ಮಾತನಾಡಿ, ಸಂಘ-ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮಗುವಿನ ಅವಶ್ಯಕತೆಗಳಿಗೆ ಸೌಲಭ್ಯಗಳನ್ನು ಒದಗಿಸಿ ಶತಮಾನೋತ್ಸವ ಶಾಲೆಗೆ ಕೈಜೋಡಿಸಿರುವುದು ಅಭಿನಂದನೀಯ ಎಂದರು.

ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಸ್ವಾಗತಿಸಿದರು, ಕಾರ್ಯದರ್ಶಿ ವೀಣಾ ತಿರ್ಲಾಪೂರ ನಿರೂಪಿಸಿದರು. ಸಿ.ಎಲ್.ಸಿ ಸಿ ಸುಮಾ ಪಾಟೀಲ ಪರಿಚಯಿಸಿದರು. ಐ.ಎಸ್.ಓ ಪುಷ್ಪಾ ಭಂಢಾರಿ ವಂದಿಸಿದರು.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಶಾಂತಾ ನಿಂಬಣ್ಣವರ, ಅನ್ನಪೂರ್ಣಾ ವರವಿ, ಮೀನಾಕ್ಷಿ ಕೊರವನವರ ವಹಿಸಿಕೊಂಡಿದ್ದರು. ಕ್ಲಬ್‌ನ ಡಿ.ಎಲ್.ಸಿ.ಸಿ ನಂದಾ ಜಡಭೋಕಿ, ಕ್ಲಬ್‌ನ ಪಿ.ಡಿ.ಸಿ ಪ್ರೇಮಾ ಗುಳಗೌಡ್ರ, ಶ್ರೇಯಾ ಪವಾಡಶೆಟ್ಟರ, ಪ್ರತಿಭಾ ಭದ್ರಶೆಟ್ಟಿ, ಅಶ್ವಿನಿ ಜಗತಾಪ, ರಜನಿ ಪಾಟೀಲ, ಸುವರ್ಣಾ ವಸ್ತçದ, ಶಿಕ್ಷಕರಾದ ಪವಿತ್ರಾ ಹಿರೇಮಠ, ಸುನಂದಾ ಕುಂಟೋಜಿ ಮುಂತಾದವರಿದ್ದರು.

ಶಾಲಾ ಮುಖ್ಯೋಪಾಧ್ಯಾಯೆ ವಿಜಯಾ ಜಕರಡ್ಡಿ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆಗಳು ಶತಮಾನೋತ್ಸವ ಶಾಲೆಯತ್ತ ಬಂದಿರುವುದು ಸಂತಸ ತಂದಿದೆ. ಶಾಲೆಯ ಮಕ್ಕಳಿಗಾಗಿ ನೀರಿನ ಬಾಟಲ್, ಕೋಲಾಟದ ಕೋಲುಗಳು, ಕ್ರೀಡಾ ಸಾಮಗ್ರಿ, ಗ್ರಂಥಾಲಯದ ಪುಸ್ತಕಗಳು, ರ್ಯಾಕ್ ನೀರಿನ ಮೂಲಭೂತ ಸೌಲಭ್ಯಗಳನ್ನು ಸರಿಗೊಳಿಸಿ ಶಾಲೆಗೆ ಸಹಾಯ ಮಾಡಿದ್ದಾರೆ ಎಂದರು.

 


Spread the love

LEAVE A REPLY

Please enter your comment!
Please enter your name here