ಮಕ್ಕಳ ಕಲೆಯನ್ನು ಪ್ರೋತ್ಸಾಹಿಸಿ: ಫಾತೀಮಾ ಖವಾಸ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಪ್ರೋತ್ಸಾಹಿ ಬೆನ್ನು ತಟ್ಟಬೇಕು ಎಂದು ಮುಳಗುಂದ ಬಿ.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಧಾನ ಗುರುಮಾತೆ ಫಾತೀಮಾ ಖವಾಸ ಹೇಳಿದರು.

Advertisement

ಅವರು ಗದಗ ಜಿಲ್ಲೆಯ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಬಾಲಭವನ ಸಮಿತಿ ವತಿಯಿಂದ ಜರುಗಿದ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳನ್ನು ಗೌರವಿಸಿ ಮಾತನಾಡಿದರು.

ಮಕ್ಕಳಲ್ಲಿ ಸಂಗೀತ, ಸಾಹಿತ್ಯ, ಭರತನಾಟ್ಯದಂತ ಹಲವಾರು ಕಲೆಗಳು ಅಡಕವಾಗಿರುತ್ತವೆ. ಅವುಗಳನ್ನು ಪಾಲಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಉತ್ತಮ ಪ್ರತಿಭೆಗಳಾಗಿ ಹೊರ ಹೊಮ್ಮಲು ಸಹಕಾರಿಯಾಗುತ್ತದೆ ಎಂದರು.

ಭರತನಾಟ್ಯದಲ್ಲಿ ಯಶಸ್ವಿನಿ ಲಮಾಣಿ, ಖುಷಿ ಸಿರೂರ, ರೂಪಾ ಬ್ಯಾಳಿ, ಶಿವಪ್ರಿಯಾ ಸೋನಗೋಜಿ, ಸನ್ನಿದಿ ಸೋನಗೋಜಿ ಬಹುಮಾನ ಪಡೆದರೆ, ಸಂಗೀತ ಸ್ಪರ್ಧೆಯಲ್ಲಿ ಸನ್ನಿಧಿ ಸೋನಗೋಜಿ ತೃತೀಯ ಸ್ಥಾನ ಪಡೆದಿದ್ದಾಳೆ.


Spread the love

LEAVE A REPLY

Please enter your comment!
Please enter your name here