HomeGadag Newsಕಲಾವಿದನಿಗೆ ಸಹನಾ ಶಕ್ತಿಯೇ ಸಂಪತ್ತು

ಕಲಾವಿದನಿಗೆ ಸಹನಾ ಶಕ್ತಿಯೇ ಸಂಪತ್ತು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕಲಾವಿದ ಲಿಯೋನಾರ್ಡ ಡ ವಿಂಚಿ ಬಹುಮುಖ ಪ್ರತಿಭೆಯ ಮಹಾ ಸಾಧಕ.

ತಮ್ಮ ಜೀವನವನ್ನೇ ಕಲೆಗಾಗಿ ಬದುಕಿ, ಲಲಿತ ಕಲೆಗಳಲ್ಲಿ ಪರಿಣಿತರಾದವರು. ಇಟಾಲಿ ದೇಶದ ಲಿಯೋನಾರ್ಡ ಶಿಲ್ಪ, ಚಿತ್ರ, ವಾಸ್ತು, ಸಂಗೀತ ಕಲೆಗಳಲ್ಲಿ ಪ್ರಬುದ್ಧತೆಯನ್ನು ಹೊಂದಿದ ಮಹಾ ಶಕ್ತಿ ಸಾಧಕ ಎಂದು ವಿಜಯ ಲಲಿತಕಲಾ ಸಂಸ್ಥೆಯ ಅಧ್ಯಕ್ಷ ಪ್ರೊ. ಅಶೋಕ ಅಕ್ಕಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದೃಶ್ಯ ಕಲಾವಿದರ ಸಂಘ ಗದಗ ಇವುಗಳ ಸಹಯೋಗದಲ್ಲಿ ವಿಶ್ವಕಲಾ ದಿನಾಚರಣೆ ಹಿನ್ನೆಲೆಯಲ್ಲಿ ಶ್ರೀ ತೋಂಟದ ಸಿದ್ದಲಿಂಗ ಶ್ರೀಗಳ ಕನ್ನಡ ಭವನ ಕ.ಸಾ.ಪ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಕಾವ್ಯ-ಕುಂಚ-ಗಾಯನ, ಕಲಾ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಾವಿದರು ಇಂದು ತಾಳ್ಮೆ ಕಳೆದುಕೊಳ್ಳುತಿದ್ದಾರೆ. ವೇಗವಾಗಿ ಬೆಳೆಯುವ ಆತುರದಲ್ಲಿ ಪ್ರಬುದ್ಧ ಕಲಾಕೃತಿ ರಚನೆ ಸಾಧ್ಯವಿಲ್ಲ. ಇದರಿಂದ ಕಲಾ ಕ್ಷೇತ್ರದ ಬೆಳವಣಿಗೆ ಆಗಲು ಸಾಧ್ಯವಿಲ್ಲ. ಅಪಾರ ಶ್ರಮ, ಶ್ರದ್ಧೆಯಿಂದ ಲಿಯೋನಾರ್ಡ ಜಗತ್ಪ್ರಸಿದ್ಧ ಕಲೆಯನ್ನು ರಚಿಸಿದ್ದಾರೆ. ಅಂತಹ ಕಲೆಗಳನ್ನು ರಚನೆ ಮಾಡಲುಡ ವಿಂಚಿಯವರಂತಹ ಆದರ್ಶಗಳನ್ನು ರೂಢಿಸಿಕೊಂಡು ಉತ್ತಮ ಕಲಾಕೃತಿಯಲ್ಲಿ ನಿರತರಾಗಬೇಕೆಂದು ತಿಳಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾದ ಡಾ. ಬಸವರಾಜ ಕಲೆಗಾರ ಮಾತನಾಡಿ, ಕಲೆ ಎಂಬುದು ಸರ್ವರಲ್ಲಿ ನೆಲೆ ಸಿಗದು. ಅದರಲ್ಲಿ ವಿಶೇಷ ಸೃಜಶೀಲತೆಯನ್ನು ರೂಢಿಸಿಕೊಂಡು ಕಲಾವಿದರಾಗಿ ಬೆಳೆದವರಿಗೆ ಮಾತ್ರ ಕಲೆ ಲಭಿಸುತ್ತದೆ. ಕಲೆಗೆ ನೆಲೆ ಕೊಡಲು ಅನೇಕ ಹೋರಾಟದ ಮುಖಾಂತರ ಇಂತಹ ಸದಾವಕಾಶ ಪಡೆಯಲು ಸಾಧ್ಯವಾಗುತ್ತದೆ. ಅಂತಹ ಹೋರಾಟ ಮಾಡುತ್ತ ಬೆಳೆದವರು ಕರುನಾಡಲ್ಲಿ ಕಲೆಯನ್ನು ಬೆಳೆಸಲು ಶ್ರಮಿಸಿದ ಕಲಾ ಮಹರ್ಷಿ ಟಿ.ಪಿ ಅಕ್ಕಿಯವರ ಶ್ರಮ ಅಪಾರವಾಗಿದೆ ಎಂದರು.

ಪ್ರೊ. ಅನ್ನದಾನಿ ಹಿರೇಮಠ ಮಾತನಾಡಿ, ಗದಗ ಚಿತ್ರಕಲಾ ಕ್ಷೇತ್ರದಲ್ಲಿ ಅದ್ವಿತೀಯ ಕಾರ್ಯ ಮಾಡಿದೆ. ಕಲೆಗೆ ಬೆಲೆ ಕಟ್ಟಲಾಗದು. ಬದಲಾದ ಪರಿಸ್ಥಿತಿಯಲ್ಲಿ ಕಲಾವಿದರು ಆಧುನಿಕ ಸ್ಪರ್ಶವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸಾಹಿತ್ಯ ಬೆಳೆವಣಿಗೆಗೆ ಕಲೆಯ ಪೋಷಣೆಅಗತ್ಯವಾಗಿದೆ. ರವಿ ಕಾಣದ್ದನ್ನು ಕವಿ ಕಂಡ. ಕವಿ ಕಾಣದ್ದನ್ನು ಕಲಾವಿದ ಕಂಡ ಎಂಬ ನಾಣ್ನುಡಿಯಂತೆ, ಕಲಾವಿದರು ಏಕಾಗ್ರತೆಯಿಂದ ರಚಿಸಿದ ಒಂದೊಂದು ಕಲಾಕೃತಿಯೂ ಅಮೂಲ್ಯ ರತ್ನ ಎಂದರು.

ಕಲಾ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ ಕಲಾವಿದರಾದ ಡಾ. ಬಿ.ಎಲ್. ಚವ್ಹಾಣ, ಡಾ. ಸಿ.ವಿ. ಬಡಿಗೇರ, ಪ್ರಾ. ಕೆ.ಎಮ್ ಕೃಷ್ಣಾ, ಎನ್.ಬಿ. ಪರ್ವತಗೌಡರ, ಷಹಜಹಾನ ಮುದಕವಿ, ಕೆ.ಬಿ. ಬಡಿಗೇರ, ಡಾ.ಬಸವರಾಜ ಕಲೆಗಾರ ಇವರನ್ನು ಸನ್ಮಾನಿಸಲಾಯಿತು.

ದೃಶ್ಯ ಕಲಾವಿದರ ಸಂಘದ ಅಧ್ಯಕ್ಷ ಡಾ. ಬಿ.ಎಲ್. ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಷಹಜಹಾನ್ ಮುದಕವಿ ಸ್ವಾಗತಿಸಿದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ವಂದಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾಗಿದ್ದ ಪ್ರಭು ಹಂದಿಗೋಳರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ. ಜಿ.ಬಿ ಪಾಟೀಲ, ಕೆ.ಎಚ್. ಬೇಲೂರ, ಸಿ.ಕೆ.ಎಚ್ ಕಡಣಿಶಾಸ್ತಿç, ಕೆ.ಎಸ್. ಬಂಡಿ, ಮಹೇಂದ್ರ ಪಾಲರೇಶ, ಪಿ.ಬಿ. ಬಂಡಿ, ಶ್ರೀಕಾಂತ ಬಡ್ಡೂರ, ರಿಯಾಜ್, ಬಸವರಾಜ ಗೌಡರ, ಅಮರೇಶ ರಾಂಪೂರ, ಕಲಾವಿದರು, ಸಾಹಿತಿಗಳು ಭಾಗವಹಿಸಿದ್ದರು.

ಕಾವ್ಯ, ಕುಂಚ ಗಾಯನದಲ್ಲಿ ಕಲಾವಿದರಾದ ನಜೀರಹ್ಮದ ಡಂಬಳ, ಪ್ರೊ. ಬಿ.ಸಿ. ಕುತ್ನಿ, ಪ್ರೊ. ಬಸವರಾಜ ನೆಲಜೇರಿ, ಶಿವರಾಜ ಕಮ್ಮಾರ, ಕೆ.ಬಿ. ಬಡಿಗೇರ ಚಿತ್ರ ರಚಿಸಿದರು. ಎ.ಎಸ್. ಮಕಾಂದಾರ, ಮರುಳಸಿದ್ದಪ್ಪ ದೊಡ್ಡಮನಿ, ಶಾರದಾ ಬಾಣದ, ಅಕ್ಕಮಹದೇವಿ ಕವiತ, ಡಾ. ವಿನಾಯಕ ಕಮತದ ಕಾವ್ಯ ವಾಚನ ಮಾಡಿದರು. ಸವಿತಾ ಗುಡ್ಡದ ರಾಗ ಸಂಯೋಜನೆಯ ಉತ್ತಮ ಗೀತೆಗಳು ಜನ ಮನ ಸೆಳೆದವು. ಎಸ್.ಎಸ್. ಚಿಕ್ಕಮಠ, ಸಂಜಯ ತೆಂಬದಮನಿ ವಾದ್ಯ ಸಹಕಾರ ನೀಡಿದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!