ಇಂಜಿನಿಯರ್ ವಿ.ಎನ್. ಪಾಟೀಲರಿಗೆ ಬೀಳ್ಕೊಡುಗೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಲೋಕೋಪಯೋಗಿ ಇಲಾಖೆಯ ಗದಗ ವಿಭಾಗದಲ್ಲಿ ಕಾರ್ಯಪಾಲಕ ಅಭಿಯಂತರ ವಿ.ಎನ್. ಪಾಟೀಲರ ವರ್ಗಾವಣೆ ನಿಮಿತ್ತ ಬೀಳ್ಕೊಡುಗೆ ಸಮಾರಂಭವನ್ನು ನಗರದ ಪರಿವೀಕ್ಷಣಾ ಮಂದಿರದಲ್ಲಿ ಏರ್ಪಡಿಸಲಾಗಿತ್ತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯ ನಿರ್ವಾಹಕ ಇಂಜಿನಿಯರ್ (ಪ್ರಭಾರ) ನಿಂಗನಗೌಡ ಎನ್.ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ.ಕಾ.ನಿ.ಇಂಜಿನಿಯರ್ ಎಂ.ಎಸ್. ಪಾಟೀಲ, ರೋಣ ಸ.ಕಾ.ನಿ.ಇಂ ಜಿ.ಎಸ್. ಪಾಟೀಲ, ಮುಂಡರಗಿ ಸ.ಕಾ.ನಿ.ಇಂ. ಹೆಚ್. ಬಸವರಾಜ, ಶಿರಹಟ್ಟಿ ಸ.ಕಾ.ನಿ.ಇಂ ಎಫ್.ಎಚ್. ತಿಮ್ಮಾಪುರ, ನರಗುಂದ ಸ.ಕಾ.ನಿ.ಇಂ ಪ್ರಭು ಹುನಗುಂದ, ಗದಗ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ದು ಕೆ. ಪಾಟೀಲ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಇಂ. ವಿ.ಎನ್. ಪಾಟೀಲ, ತಮಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಇಂ. ಪ್ರಿಯಾ ಭಜಂತ್ರಿ ಸ್ವಾಗತಿಸಿದರು. ಪ್ರಕಾಶ ಮುದಗಲ್ಲ ನಿರೂಪಿಸಿದರು.

ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಸಿ. ಮಲ್ಲಿಕಾರ್ಜುನ, ಶರಣಪ್ಪ ದದೇಗಲ್, ಎಫ್.ಬಿ. ಆಟಗಾಳಿ, ಎಂ.ಎಚ್. ಕರದೇಗೌಡರ, ಮಹೇಶ್ವರಪ್ಪ ಗೊಜನೂರ, ಎಫ್.ಎಂ. ಅಣ್ಣೀಗೇರಿ ಉಪಸ್ಥಿತರಿದ್ದರು. ಕೊನೆಯಲ್ಲಿ ಪ್ರಿಯಾ ಭಜಂತ್ರಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here