ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಪುಸ್ತಕ

0
'Engineering Management-Entrepreneurship' book release
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ವಿಶ್ವ ಪುಸ್ತಕ ದಿನಾಚರಣೆಯಲ್ಲಿ ಎಲೆಕ್ಟಿçಕಲ್ ವಿಭಾಗದ ಮುಖ್ಯಸ್ಥ ಡಾ. ಈರಣ್ಣ ಕೋರಚಗಾಂವ ರಚಿಸಿದ ‘ಇಂಜಿನಿಯರಿಂಗ್ ಮ್ಯಾನೇಜಮೆಂಟ್ ಮತ್ತು ಎಂಟ್ರಪ್ರೆನ್ಯುರಶಿಪ್’ ಪುಸ್ತಕವನ್ನು ತೋಂಟದಾರ್ಯ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ ಬಿಡುಗಡೆ ಮಾಡಿದರು.

Advertisement

ಕಾಲೇಜಿನ ಪ್ರಿನ್ಸಿಪಾಲ್ ಡಾ. ಎಂ.ಎಂ. ಅವಟಿ ಪುಸ್ತಕ ಪ್ರಕಟಣೆಯ ಬಗ್ಗೆ ಸಂತೋಷ ವ್ಯಕ್ತ ಪಡಿಸುತ್ತಾ, ಕಾಲೇಜಿನ ಎಲ್ಲಾ ಶಿಕ್ಷಕರು ಕೂಡ ತಮ್ಮ ತಮ್ಮ ಅನುಭವದ ಪರಿಧಿಯಲ್ಲಿ ಪುಸ್ತಕಗಳನ್ನು ಪ್ರಕಟನೆ ಮಾಡಲಿ. ಇದರಿಂದ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮತ್ತು ಅನುಭವ ಬೆಳೆಯುತ್ತದೆ ಎಂದರು.

ಪುಸ್ತಕದ ಲೇಖಕರಾದ ಡಾ. ಈರಣ್ಣ ಕೋರಚಗಾಂವ ಮಾತನಾಡುತ್ತಾ, ಈ ಪುಸ್ತಕದಲ್ಲಿ ಸುಲಭ ರೀತಿಯಲ್ಲಿ ವಿಷಯ ಪ್ರಸ್ತಾವನೆ ಮತ್ತು ನಿರೂಪಣೆ ಮಾಡಲಾಗಿದ್ದು, ಪ್ರಶ್ನೆಗಳಿಗೆ ಖಚಿತ ಉತ್ತರ ಬರೆಯುವ ಮಾದರಿಯನ್ನು ಸಹ ತಿಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಈ ಪುಸ್ತಕ ತಮ್ಮ ಜೀವನ ಪರ್ಯಂತ ಮಾರ್ಗದರ್ಶಿಯಾಗಲಿದೆ. ಈ ಪುಸ್ತಕಗಳು ಅಮೇಝಾನ್, ಫ್ಲಿಪ್‌ಕಾರ್ಟ್ ಮುಂತಾದ ಆನ್‌ಲೈನ್ ಸ್ಟೋರ್ಸ್ನಲ್ಲಿ ಲಭ್ಯ ಎಂದು ಹೇಳಿದರು.

ಪ್ರೊ. ಜಗದೀಶ ಶಿವನಗುತ್ತಿ ಮತ್ತು ಪ್ರೊ. ಸಂತೋಷಕುಮಾರ್ ಜಿ.ಎಂ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಜಾಥಾ ನಡೆಸಿದರು. ಪ್ರೊ. ಮಲ್ಲಿಕಾರ್ಜುನ ಜಿ.ಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರೊ. ಗೌತಮ ರೇವಣಕರ, ಪ್ರೊ. ದಯಾನಂದ ಗೌಡರ, ಪ್ರೊ. ಲೋಕೇಶ, ಪ್ರೊ. ಅಶ್ವಿನಿ ಅರಳಿ, ಪ್ರೊ. ಮಧುಸೂಧನ ಕುಲಕರ್ಣಿ, ಪ್ರೊ. ಶೈಲಜಾ ಮುದೇನಗುಡಿ, ಪ್ರೊ. ತೆಹಸಿನ್ ಶಿಗ್ಲಿ, ಪ್ರೊ. ಪ್ರಸನ್ನ ನಾಡಗೌಡ, ಪ್ರೊ. ಸುನಿಲ ಪಾಟೀಲ್, ಪ್ರೊ. ವೀರೇಶ ಮಾಗಳದ, ಪ್ರೊ. ವಿಜಯಕುಮಾರ ಮಾಲಗಿತ್ತಿ, ಪ್ರೊ. ಮಹಾಂತ ಕಟ್ಟಿಮನಿ, ಪ್ರೊ. ಶಶಿಧರಗೌಡ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here