ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ಮತ್ತು ಇಂಗ್ಲೆಂಡ್ 2-2ರಿಂದ ಸರಣಿಯನ್ನು ಸಮಬಲಗೊಳಿಸಿವೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಐದನೇ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಆಲಿ ಪೋಪ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಭಾರತ ಬ್ಯಾಟಿಂಗ್ ಆರಂಭಿಸಿದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರರು ನಿರಾಸೆ ಮೂಡಿಸಿದರು.
ಜೈಸ್ವಾಲ್ ಕೇವಲ 2 ರನ್‌ಗೆ ಔಟಾಗಿದರೆ, ಕನ್ನಡಿಗ ಕೆ.ಎಲ್. ರಾಹುಲ್ ಕೇವಲ 14 ರನ್ ಗಳಿಸಿ ಪೆವಿಲಿಯನ್ ಸೇರಿದರು. ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡ ಆರಂಭದಲ್ಲಿ ಸಂಕಷ್ಟಕ್ಕೆ ಒಳಗಾಗಿತ್ತು. ಏಕೆಂದರೆ ಜೈಸ್ವಾಲ್ ಕೇವಲ 2 ರನ್‌ಗೆ ಔಟ್ ಆದ್ರೆ ಕನ್ನಡಿಗ ರಾಹುಲ್ ಅವರು ಕೇವಲ 14 ರನ್ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದ್ದರು.
ನಾಯಕ ಶುಭ್ಮನ್ ಗಿಲ್ ಕೂಡ 21 ರನ್‌ಗೆ ರನೌಟ್ ಆಗಿದ್ದರು. ಧೃವ್ ಜುರೆಲ್ ಹಾಗೂ ವಾಷಿಂಗ್ಟನ್ ಸುಂದರ್ ಕೆಲ ಸಮಯ ಬ್ಯಾಟಿಂಗ್ ಮಾಡಿದರೂ ಇಂಗ್ಲೆಂಡ್ ದಾಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್ ಅವರ ಅಮೋಘವಾದ ಅರ್ಧಶತಕ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗೆ ಆಲೌಟ್ ಆಗಿತ್ತು.
ಇದಾದ ಮೇಲೆ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಆರಂಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು. ಓಪನರ್ ಜಾಕ್ ಕ್ರಾಲಿ ಅರ್ಧಶತಕ ಬಾರಿಸಿದ್ದರು. ಹ್ಯಾರಿ ಬ್ರೂಕ್ 53 ರನ್ ಸಿಡಿಸಿದ್ದರು. ಕೊನೆಯಲ್ಲಿ ಬ್ಯಾಟಿಂಗ್ನಲ್ಲಿ ವಿಫಲತೆ ಹೆಚ್ಚಾಯಿತು. ಉಳಿದ ಬ್ಯಾಟರ್ಸ್ ಉತ್ತಮ ಬ್ಯಾಟಿಂಗ್ ಮಾಡದ ಕಾರಣ ಆಂಗ್ಲ ಪಡೆ ಕೇವಲ 247 ರನ್‌ಗೆ ಆಲೌಟ್ ಆಗಿತ್ತು. ಆದರೆ ಇನ್ನಿಂಗ್ಸ್‌ನಲ್ಲಿ 23 ರನ್ಗಳ ಮುನ್ನಡೆ ಕಾಯ್ದುಕೊಂಡಿದ್ದರು.
ನಂತರ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿತ್ತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 118 ರನ್ಗಳ ಚಚ್ಚಿ ಭಾರತಕ್ಕೆ ನೆರವಾಗಿದ್ದರು. ಇನ್ನು ಈ ಇನ್ನಿಂಗ್ಸ್ನಲ್ಲೂ ಕೆ.ಎಲ್ ರಾಹುಲ್ (7) ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಆಲ್ರೌಂಡರ್ ಪ್ರದರ್ಶನ ನೀಡುವ ಆಕಾಶ್ ದೀಪ್ 66 ರನ್ ಗಳಿಸಿ ಕ್ಯಾಚ್ ಔಟ್ ಆಗಿದ್ದರು.
ಇಲ್ಲಿಯೂ ನಾಯಕ ಗಿಲ್ 11 ರನ್‌ಗೆ ಔಟ್ ಆಗಿದ್ದು ತಂಡಕ್ಕೆ ದೊಡ್ಡ ಹೊಡೆತ ಕೊಟ್ಟಿತ್ತು. ಆದರೆ 7ನೇ ವಿಕೆಟ್ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರ ಬಿರುಸಿನ ಬ್ಯಾಟಿಂಗ್ನಿಂದ ಇಬ್ಬರೂ ಹಾಫ್ ಸೆಂಚುರಿಗಳನ್ನ ಬಾರಿಸಿದ್ದರು. ಹೀಗಾಗಿ 2ನೇ ಇನ್ನಿಂಗ್ಸ್‌ನಲ್ಲಿ ಭಾರತ 396 ರನ್‌ಗೆ ಆಲೌಟ್ ಆಗಿತ್ತು. ಹೀಗಾಗಿ ಗೆಲುವಿಗೆ 374 ರನ್ಗಳ ಟಾರ್ಗೆಟ್ ಅನ್ನು ಭಾರತ ನೀಡಿತ್ತು.
ಇದರಿಂದಲೇ ಉಳಿದ ಬ್ಯಾಟರ್ಸ್ 17 ರನ್ಗಳ ಗಡಿ ಕೂಡ ದಾಟಲಿಲ್ಲ. ಇನ್ನಿಂಗ್ಸ್‌ನಲ್ಲಿ ಭರ್ಜರಿ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಸಿರಾಜ್ 5 ವಿಕೆಟ್ ಉರುಳಿಸಿದ್ರೆ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಕಬಳಿಸಿ ಆಂಗ್ಲೆ ಬ್ಯಾಟಿಂಗ್ಗೆ ಬ್ರೇಕ್ ಹಾಕಿದ್ದರು. ಈ ಎಲ್ಲದರಿಂದ ಟೀಮ್ ಇಂಡಿಯಾ ಕೇವಲ 6 ರನ್ಗಳಿಂದ ಭರ್ಜರಿ ಗೆಲುವು ಪಡೆದು ಸಂಭ್ರಮಿಸಿದೆ. ಜೊತೆಗೆ ಸರಣಿಯನ್ನು 2-2 ರಿಂದ ಸಮಬಲ ಮಾಡಿಕೊಂಡಿದೆ. ಐದು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಡ್ರಾ ಆಗಿತ್ತು.