ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಶಹರ ವಲಯದ ಬೆಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಹಾಗೂ ಆಂಗ್ಲ ಮಾಧ್ಯಮ ಶಾಲೆ ನಂ.2ರಲ್ಲಿ ಇಂಗ್ಲಿಷ್ ಲ್ಯಾಂಗ್ವೇಜ್ ಲ್ಯಾಬ್ ಉದ್ಘಾಟನೆ ನೆರವೇರಿಸಲಾಯಿತು.
ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಅವಿರತ 3 ತಿಂಗಳು ಶ್ರಮಿಸಿ ಕೊಠಡಿಯನ್ನು ಬಣ್ಣ, ಚಿತ್ರಗಳಿಂದ ಸ್ವತಃ ಅಲಂಕರಿಸಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಇಂಗ್ಲಿಷ್ ಕಲಿಕಾ ವಾತಾವರಣ ನಿರ್ಮಾಣ ಮಾಡಿದ ಶಿಕ್ಷಕಿ ಎಂ.ಎನ್. ಸೊಟಕನಾಳ ಇತರರಿಗೂ ಮಾದರಿಯಾಗಿದ್ದಾರೆ. ಇಂತಹ ಶಿಕ್ಷಕರು ಸಮಾಜದ ಆಸ್ತಿ ಎಂದು ನುಡಿದರು.
ಮುಖ್ಯ ಅತಿಥಿಗಳಾದ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ ಮಾತನಾಡಿ, ಶಿಕ್ಷಕರ ಇಂತಹ ಪ್ರಯತ್ನ ಇಡೀ ವಲಯದ ಹೆಮ್ಮೆ ಎಂದರು. ಸಮಾರಂಭದಲ್ಲಿ ಪಾಲ್ಗೊಂಡ ಇಲಾಖೆಯ ಬಿಆರ್‌ಪಿ, ಸಿಆರ್‌ಪಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಹರ ವಲಯದ ಅಧ್ಯಕ್ಷರಾದ ಮಂಗಳಗುಡ್ಡ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಮತ್ತು ಪಾಲಕರು ಶಿಕ್ಷಕರ ಶ್ರಮದಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯೋಪಾಧ್ಯಾಯರಾದ ಎಸ್.ಎಂ. ಮೂಗನೂರ ಸ್ವಾಗತಿಸಿದರು. ರಶೀದ್ ವಂದಿಸಿದರು.