ಮಂಡ್ಯ: ಇಂದು ವಿಸರ್ಜನೆ ಆಗಬೇಕಿದ್ದ ಗಣಪತಿಯನ್ನೇ ರಾತ್ರೋರಾತ್ರಿ ಕಳ್ಳತನ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರು ಇಂದು ವಿಜೃಂಭಣೆಯಿಂದ ವಿಘ್ನ ವಿನಾಯಕನ ವಿಸರ್ಜನೆಗೆ ಪ್ಲಾನ್ ಮಾಡಿದ್ದರು
ಆದರೆ ಶಿವಲಿಂಗದ ಕೆಳಗೆ ಪ್ರತಿಷ್ಠಾಪಿಸಿದ್ದ ಗಣೇಶನಿಗೆ ಕಿಡಿಗೇಡಿಗಳು ಕನ್ನ ಹಾಕಿದ್ದಾರೆ. ಬೆಳಿಗ್ಗೆ ಗ್ರಾಮಸ್ಥರು ಬಂದು ನೋಡಿದಾಗ ಗಣೇಶ ವಿಗ್ರಹ ಕಣ್ಮರೆಯಾಗಿದ್ದನ್ನು ಕಂಡು ಶಾಕ್ ಆಗಿದ್ದಾರೆ. ಗಣಪನಿಲ್ಲದನ್ನ ಕಂಡು ಬೇಸರಗೊಂಡಿದ್ದಾರೆ.
ಅನ್ನಸಂತರ್ಪಣೆ ಮೂಲಕ ಅದ್ದೂರಿಯಾಗಿ ಮೂರ್ತಿ ವಿಸರ್ಜನೆಗೆ ಮುಂದಾಗಿದ್ದ ಗ್ರಾಮಸ್ಥರಿಗೆ ಭಾರೀ ನಿರಾಸೆಯಾಗಿದ್ದಾರೆ. ಮೂರ್ತಿ ಕಳ್ಳತನ ಮಾಡಿರುವ ಕಿಡಿಗೇಡಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.



