ಕಾಂತಾರ ವೀಕ್ಷಣೆಗೆ ಇಡೀ ಥಿಯೇಟರ್ ಬುಕ್; ಟಿಕೆಟ್ ಸಿಗದವರಿಗೆ ಸೋಮವಾರ ವ್ಯವಸ್ಥೆ – ಪ್ರತಾಪ್‌ ಸಿಂಹ

0
Spread the love

ಮೈಸೂರು:-ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಕಾಂತಾರ ಚಾಪ್ಟರ್‌ 1 ಸಿನಿಮಾ ವೀಕ್ಷಣೆಗೆ ಇಡೀ ಥಿಯೇಟರ್ ಬುಕ್ ಮಾಡಿದ್ದು, ಟಿಕೆಟ್ ಸಿಗದ ಬಿಜೆಪಿ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡ್ತೀನಿ ಎಂದು ಮಾಹಿತಿ ನೀಡಿದ್ದಾರೆ.

Advertisement

ನಾಳೆ ಸಂಜೆ 4 ಗಂಟೆಗೆ ಕಾರ್ಯಕರ್ತರೆಲ್ಲ ಸೇರಿ ಕಾಂತಾರ-2 ನೋಡೋಣ, ಡಿಆರ್‌ಸಿಯಲ್ಲಿ ಫುಲ್‌ ಸ್ಕ್ರೀನ್‌ ಬುಕ್‌ ಮಾಡಿದ್ದೇನೆ’ ಎಂದು ಎಕ್ಸ್‌ ಖಾತೆಯಲ್ಲಿ ಮಾಜಿ ಸಂಸದ ಪ್ರತಾಪ್‌ ಸಿಂಹ ಪೋಸ್ಟ್‌ ಹಂಚಿಕೊಂಡಿದ್ದರು. 197 ಟಿಕೆಟ್‌ಗೆ 68,920 ರೂ. ಪಾವತಿಸಿ ಥಿಯೇಟರ್‌ ಬುಕ್‌ ಮಾಡಿರುವ ರಶೀದಿಯನ್ನೂ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ಈಗ ಮತ್ತೊಂದು ಪೋಸ್ಟ್‌ ಹಾಕಿದ್ದು, ಟಿಕೆಟ್‌ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡಿಕೊಡುತ್ತೇನೆಂದು ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಕಾರ್ಯಕರ್ತರಿಗೆ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ಇನ್ನೂ ಕಾಂತಾರ ಚಾಪ್ಟರ್‌ 1 ತೆರೆ ಕಂಡ ಎರಡೇ ದಿನಕ್ಕೆ ಬರೋಬ್ಬರಿ 100 ಕೋಟಿ ಕ್ಲಬ್‌ ಸೇರಿದೆ. ಎಲ್ಲೆಡೆ ಥಿಯೇಟರ್‌ಗಳು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರು ಸಿನಿಮಾವನ್ನು ಹಾಡಿಹೊಗಳಿದ್ದಾರೆ.


Spread the love

LEAVE A REPLY

Please enter your comment!
Please enter your name here