ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮ, ಅಖಿಲ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ, ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟಗಳ `ಗದಗ ಉತ್ಸವ-2025’ರ ನಿಮಿತ್ತ ರವಿವಾರ ಕ್ರಿಕೆಟ್ ಟೂರ್ನಾಮೆಟ್ ಆಯೋಜಿಸಲಾಗಿತ್ತು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯರ ನಾಲ್ಕು ತಂಡಗಳು ಭಾಗವಹಿಸಿದ್ದು, 10 ಓವರ್‌ಗಳ ಪಂದ್ಯಗಳನ್ನು ಆಡಿಸಲಾಯಿತು. ಅಂತಿಮವಾಗಿ ಗ್ರೇನ್ ಮಾರುಕಟ್ಟೆ ತಂಡ ಟಾಸ್ ಗೆದ್ದು ಕ್ಷೇತ್ರ ರಕ್ಷಣೆಗೆ ಇಳಿಯಿತು. ಎಸ್.ಪಿ. ವಾರಿಯರ್ ಎ.ಪಿ.ಎಂ.ಸಿ ತಂಡ ಬ್ಯಾಟಿಂಗ್‌ಗೆ ಇಳಿದು 10 ಓವರ್‌ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತು.
ನಂತರ ಗ್ರೇನ್ ಮಾರ್ಕೆಟ್ ತಂಡ ಬ್ಯಾಟಿಂಗ್ ಮಾಡಿ, 10 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡಿತು. ಅಂತಿಮ ಓವರ್‌ನಲ್ಲಿ ಒಂದು ಬಾಲ್‌ಗೆ ಒಂದು ರನ್ ಅವಶ್ಯಕತೆ ಇದ್ದಾಗ ಮ್ಯಾಚ್ ಕುತೂಹಲ ಕೆರಳಿಸಿತು. ಕೊನೆಯ ಎಸೆತಕ್ಕೆ ಒಂದು ಸಿಕ್ಸ್ ಬಾರಿಸಿದ ಗ್ರೇನ್ ಮಾರ್ಕೆಟ್ ತಂಡ ಪ್ರಥಮ ಸ್ಥಾನ ಗಳಿಸಿತು. ಎಸ್.ಪಿ. ವಾರಿಯರ್ ಎ.ಪಿ.ಎಂ.ಸಿ ತಂಡ ರನ್ನರ್ ಆಗಿ ಹೊರಹೊಮ್ಮಿತು.
ವಿಜೇತ ತಂಡಗಳಿಗೆ ಬಹುಮಾನ, ಪಾರಿತೋಷಕವನ್ನು ಗದುಗಿನ ರಣಜಿ ಕ್ರಿಕೆಟ್ ಆಟಗಾರ ಸುನಿಲ್ ಜೋಶಿ ವಿತರಿಸಿ ಶುಭಾಶಯ ಕೋರಿದರು. ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಪಾಟೀಲ, ಉಪಾಧ್ಯಕ್ಷರು, ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.