ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬೆಳದಂತೆ ನಮ್ಮ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ವ್ಯಾಪಾರೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಬೇಕಾಗಿದೆ. ಜೊತೆಗೆ ನಮ್ಮ ಲೆಕ್ಕಪತ್ರವನ್ನು ಸರಿಯಾಗಿ ಇಟ್ಟುಕೊಳ್ಳುವುದು ಅಷ್ಟೇ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಹೊಸದಾಗಿ ಅಭಿವೃದ್ಧಿಗೊಂಡ ಟ್ಯಾಲಿ ಪ್ರೈಮ್ 7.0ನ್ನು ಪ್ರತಿಯೊಬ್ಬ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳು ಅಳವಡಿಸಿಕೊಂಡು ತಮ್ಮ ಲೆಕ್ಕಪತ್ರ, ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಗಳಿಗೆ ಫೈಲಿಂಗ್‌ಗಳನ್ನು ಸುಲಭವಾಗಿ ನಿಭಾಯಿಸಬಹುದು ಎಂದು ರೂಪಾರಾಣಿ ಹೇಳಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಪುವಿ ಬೆಂಗಳೂರು ಹಾಗೂ ಅಕೌಂಟ್ ಪ್ರೋ ಸಲ್ಯೂಶನ್ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಟ್ಯಾಲಿ ಪ್ರೈಮ್ 7.0 ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರೆಸ್ಟ್ ಆಫ್ ಕರ್ನಾಟಕ ಟ್ಯಾಲಿ ಸೊಲ್ಯೂಶನ್ ಬೆಂಗಳೂರು ಇದರ ರಿಜಿನಲ್ ಮ್ಯಾನೇಜರ್ ರಾಮನಗೌಡ ಜಿ.ಪಿ. ಹಾಗೂ ಟ್ಯಾಲಿ ಸೊಲ್ಯೂಶನ್ ಹುಬ್ಬಳ್ಳಿಯ ಜಯರಾಜ ಎಸ್ ಮಾತನಾಡುತ್ತಾ, ವ್ಯಾಪಾರಸ್ಥರು ತಮ್ಮ ಲೆಕ್ಕಪತ್ರವನ್ನು ಸರಿಯಾಗಿ ನಿಭಾಯಿಸಲು ಈ ಟ್ಯಾಲಿ ಪ್ರೈಮ್ ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು.
ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ವ್ಯಾಪಾರ-ವ್ಯವಹಾರವನ್ನು ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸುತ್ತೇವೆಯೋ ಅಷ್ಟೇ ಲೆಕ್ಕಪತ್ರ ಇಡುವುದು ಮುಖ್ಯವಾಗಿದೆ. ಹೊಸ ಹೊಸ ತಂತ್ರಜ್ಞಾನ ಬೆಳೆದಂತೆ ನಾವು ಅವುಗಳನ್ನು ಅಳವಡಿಸಿಕೊಂಡು ವ್ಯಾಪಾರೋದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದರು.
ಪದ್ಮಾ ಕಬಾಡಿ ಪ್ರಾರ್ಥಿಸಿದರು. ಸಂಸ್ಥೆಯ ಮಹಿಳಾ ಘಟಕದ ಗೌರವ ಕಾರ್ಯದರ್ಶಿ ಪೂರ್ಣಿಮಾ ಕೆ.ಆಟದ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಘಟಕದ ಕೋಶಾಧ್ಯಕ್ಷರಾದ ರೇಣುಕಾ ಲಿಂಗರಾಜ ಅಮಾತ್ಯ ವಂದಿಸಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾದ ಶರಣಬಸಪ್ಪ ಸಂಗಪ್ಪ ಗುಡಿಮನಿ ಮಾತನಾಡುತ್ತಾ, ವ್ಯಾಪಾರ ಮಾಡಿದರೆ ಸಾಲದು, ಲೆಕ್ಕಪತ್ರವನ್ನು ಇಡುವುದು ಅತಿ ಅವಶ್ಯಕವಾಗಿದೆ. ಕೊಟ್ಟಿಗಟ್ಟಲೇ ವ್ಯಾಪಾರ ಮಾಡುತ್ತೇವೆ. ಆದರೆ ಲೆಕ್ಕಪತ್ರವನ್ನು ನಿಭಾಯಿಸುವುದು ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.



