ನೂತನ ಒಳಾಂಗಣ ರಥದ ಪುರಪ್ರವೇಶ

0
Entry of the new chariot
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಕಳಸಾಪೂರ ರಸ್ತೆಗೆ ಹೊಂದಿಕೊಂಡಿರುವ ನಂಜನಗೂಡು ಮಂತ್ರಾಲಯ ಶಾಖಾಮಠದ ಕಟ್ಟಡ ಈಗಾಗಲೇ ಪೂರ್ಣಹಂತಕ್ಕೆ ತಲುಪಿದ್ದು, ಶ್ರೀಶ್ರೀಶ್ರೀ ಸುಭುದೇಂದ್ರ ತೀರ್ಥರ ಶ್ರೀಗಳ ಅನುಗ್ರಹದಂತೆ ಅತೀ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಶ್ರೀ ಮಠದ ಕಟ್ಟಡದಲ್ಲಿ ಹಲವಾರು ಭಕ್ತರು, ದಾನಿಗಳು ಸಕ್ರೀಯವಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಗರ್ಭಗುಡಿ, ಪ್ರಾಂಗಣ, ಮೊದಲನೇ ಅಂತಸ್ತು ಹಾಗೂ ಪಾಕಶಾಲೆ, ಶ್ರೀಗಳ ವಿಶ್ರಾಂತಿ ಗೃಹಗಳು ಎಲ್ಲವೂ ಶ್ರೀಗಳ ಆಶಯದಂತೆ, ವಾಸ್ತುಶಾಸ್ತçದಂತೆ ನಿರ್ಮಾಣವಾಗಿದೆ. ಕೃಷ್ಣಶಿಲೆಯಲ್ಲಿ ಬೃಂದಾವನ, ಪ್ರಾಣದೇವರು, ಬೃಂದಾವನದ ಮುಂದೆ ಗಜಶಿಲ್ಪಗಳು ನಿರ್ಮಾಣವಾಗಿವೆ. ಪೂಜೆಗೆ ಅವಶ್ಯಕವಾಗಿರುವ ಪ್ರಲ್ಹಾದ ರಾಜರ ರಜತ ಉತ್ಸವ ಮೂರ್ತಿ, ಬೃಂದಾವನದ ರಜತ ಕವಚ, ಶ್ರೀ ರಾಘವೇಂದ್ರ ಸ್ವಾಮಿಗಳ ರಜತ ಮೂರ್ತಿ ಮತ್ತು ಪ್ರಾಣದೇವರ ರಜತ ಪ್ರಭಾವಳಿ ಹಾಗೂ ರಜತ ಪಾದುಕೆಗಳು, ಅಲ್ಲದೇ ದೊಡ್ಡ ಕಂಚಿನ ಗಂಟೆ, ಪಲ್ಲಕ್ಕಿ ಹಲವಾರು ಪೂಜಾ ಸಾಮಗ್ರಿಗಳನ್ನು ಭಕ್ತರು ಭಕ್ತಿ ಕಾಣಿಕೆಯಾಗಿ ಸಲ್ಲಿಸಿದ್ದಾರೆ.
ರಥಶಿಲ್ಪಿಯಾದ ಶ್ರೀ ಕಾಳಾಚಾರಿ ಸಹೋದರರು ಕಲಾತ್ಮಕವಾದ ಒಳಾಂಗಣ ರಥ ನಿರ್ಮಿಸಿದ್ದು, ಸದರ ರಥವನ್ನು ಬೆಟಗೇರಿಯ ಭಾಗದಲ್ಲಿ ಪುರಪ್ರವೇಶದ ಸಂದರ್ಭದಲ್ಲಿ ಹಲವಾರು ಭಕ್ತರು ಸೇರಿ ಪೂಜೆ ಸಲ್ಲಿಸಿದರು.
ಆಗಮಿಸುವ ಭಕ್ತರಿಗೆ ಹಲವಾರು ಮೂಲಭೂತ ಸೌಕರ್ಯಗಳನ್ನು ನೀಡುವ ಸದಿಚ್ಛೆಯಿದ್ದು, ಸೇವೆ ಸಲ್ಲಿಸಲು ಭಕ್ತರು ರಾಘವೇಂದ್ರ ಮಠದ ಎಸ್.ಬಿ.ಐ. ಬ್ಯಾಂಕ್ ಖಾತೆ ನಂ. 32608728239 ಈ ಖಾತೆಗೆ ಹಣ ಜಮಾ ಮಾಡಬಹುದು ಹಾಗೂ ಇತರೆ ಮಾಹಿತಿಗಾಗಿ ಕಟ್ಟಡದ ಸಮಿತಿಯ ಕಾರ್ಯದರ್ಶಿ ಗುರುರಾಜ ಹೆಬಸೂರ (32608728239) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Spread the love
Advertisement

LEAVE A REPLY

Please enter your comment!
Please enter your name here