ನೆಟ್ಟ ಸಸಿಗಳ ಬಗ್ಗೆ ಕಾಳಜಿಯಿರಲಿ : ಎಚ್.ಎನ್. ನಾಯಕ್

0
Environment Day
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ : ಸಮೀಪದ ಶಿಗ್ಲಿ ಕ್ಲಸ್ಟರ್ ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಬುಧವಾರ ನೆಡುವುದರೊಂದಿಗೆ ಪರಿಸರ ದಿನವನ್ನು ಆಚರಿಸಲಾಯಿತು. ಕ್ಷೇತ್ರ ಶಿಕ್ಷಣಧಿಕಾರಿ ಎಚ್.ಎನ್. ನಾಯಕ್ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಿಸರ ದಿನಾಚರಣೆ ದಿನದಂದು ಸಸಿಗಳನ್ನು ನೆಟ್ಟು ಕಾಳಜಿ ಮಾಡದೆ ಬಿಡುವದರಿಂದ ಈ ಆಚರಣೆಗೆ ಮಹತ್ವ ದೊರೆಯುವದಿಲ್ಲ. ಈ ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲ ಶಾಲೆಗಳಲ್ಲಿ ನೀಡಿರುವ ಸಸಿಗಳನ್ನು ನೆಟ್ಟು ಕಾಳಜಿಯಿಂದ ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಶಿಗ್ಲಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಡಿಸೋಜ, ಸಿಬ್ಬಂದಿ ಬೂದಿಹಾಳ ಸಸಿಗಳನ್ನು ನೆಟ್ಟರು. ಬಿಆರ್‌ಪಿ ಈಶ್ವರ ಮೆಡ್ಲೇರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇನ್‌ಸ್ಪೆöÊರ್ ಅವಾರ್ಡ್ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಫಾತಿಮ ನದಾಫ್, ಮುಸ್ಕಾನ್ ಶಿರಬಡಗಿ ಅವರನ್ನು ಸನ್ಮಾನಿಸಲಾಯಿತು.

ಶಾಲೆಯ ಪ್ರಧಾನ ಗುರುಗಳಾದ ಸೋಮನಕಟ್ಟಿ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ವೀರಣ್ಣ ಅಳ್ಳಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಿ. ನಾವಿ ನಿರೂಪಿಸಿದರು. ಪಿ.ಎ. ಕೊರವರ ವಂದಿಸಿದರು. ಸಿಆರ್‌ಪಿ ಜ್ಯೋತಿ ಗಾಯಕವಾಡ, ಎಸ್‌ಡಿಎಂಸಿ ಸದಸ್ಯರಾದ ಗದಿಗೆಪ್ಪ ಮಾಗಡಿ, ಶಾಲೆಯ ಎಲ್ಲಾ ಸಿಬ್ಬಂದಿ ಬಳಗದವರು, ಎಸ್.ಬಿ. ಅಣ್ಣಿಗೇರಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here