HomeGadag Newsಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಆಧುನಿಕತೆಯ ಉತ್ತುಂಗ ತಲುಪಿರುವ ಈ ಕಾಲದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳ ಅವಶ್ಯಕತೆ ಹೆಚ್ಚಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ ನುಡಿದರು.

ಅವರು ಇಲ್ಲಿನ ವಾರ್ಡ್ ನಂ.33ರಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪರಿಸರ ದಿನಾಚರಣೆ ನಿಸರ್ಗದ ಉಳಿವಿನ ಕುರಿತು ಜಾಗೃತಿ ಮೂಡಿಸಲು ಇರುವ ವಿಶೇಷ ದಿನ. ಆದರೆ ಪರಿಸರದ ಉಳಿವಿನ ಚಿಂತನೆ ಇದೊಂದೇ ದಿನಕ್ಕೆ ಸೀಮಿತವಾಗಬಾರದು. ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಹೊಂದಬೇಕು ಎಂದರು.

ವಿದ್ಯಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಮತ್ತೂರ, ಉಪಾಧ್ಯಕ್ಷ ವಿಶ್ವನಾಥ ಟೆಂಗಿನಕಾಯಿ, ಗೌರವಾಧ್ಯಕ್ಷ ಹಿರೇಮಠ, ನಗರಸಭಾ ಸದಸ್ಯರಾದ ಅನಿತಾ ಗಡ್ಡಿ, ಸರಕಾರಿ ಪದವಿಪೂರ್ವ ಮಹಾವಿದ್ಯಾಲಯಯದ ಪ್ರಾಚಾರ್ಯರಾದ ಹೊಸಮನಿ, ಉಪನ್ಯಾಸಕರಾದ ಗಂಗನಗೌಡ್ರ ಸೇರಿದಂತೆ ಭೋದಕ-ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕರಾದ ವೀರೇಶ ಪಾಟೀಲ, ಶ್ರೀ ವಿದ್ಯಾಗಣಪತಿ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ಖಜಾಂಚಿ ಮಲ್ಲೇಶ್ ವಗ್ಗನವರ, ಟ್ರಸ್ಟ್ನ ಉದ್ಯಾನವನ ಸಮಿತಿಯ ಶಂಕರಯ್ಯ ಕೂಡ್ಲಪ್ಪನವರ ಹಾಗೂ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!