ಬೆಂಗಳೂರು: ಡಿಕೆಶಿಹೇಳಿಕೆಯನ್ನುಭಗವಂತನೂಮೆಚ್ಚುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಚಾಮುಂಡಿ ಬೆಟ್ಟ ಕೇವಲ ಹಿಂದೂಗಳದ್ದಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು,
Advertisement
ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಇದು ಯಾರನ್ನು ಖುಷಿಪಡಿಸಲು ಕೊಟ್ಟ ಹೇಳಿಕೆ?. ಇದು ಅಕ್ಷಮ್ಯ ಅಪರಾಧ. ಗಾಂಧಿ ಕುಟುಂಬಕ್ಕೆ ಖುಷಿಪಡಿಸಲು ಹೇಳಿದ ಹೇಳಿಕೆಯಿದು ಎಂದರು.
ಇನ್ನೂ ರಾಮನಗರದಲ್ಲಿ ಏಸು ಕ್ರಿಸ್ತನ ಪ್ರತಿಮೆ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದರು. ಹೇಗಾದರೂ ಮಾಡಿ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಯತ್ನ ಮಾಡುತ್ತಿದ್ದಾರೆ. ಈ ಹೇಳಿಕೆಯನ್ನು ಭಗವಂತ ಸಹ ಮೆಚ್ಚುವುದಿಲ್ಲ. ಸದನದಲ್ಲಿ ಸದಾ ವತ್ಸಲೇ.. ಆರ್ಎಸ್ಎಸ್ ಗೀತೆ ಎಂದು ಹೇಳಿದರು. ನಂತರ ಅದರ ಬಗ್ಗೆ ಕ್ಷಮೆ ಕೇಳಿದರು. ಇದು ಒಡೆದು ಆಳುವ ನೀತಿ ಎಂದು ವಾಗ್ದಾಳಿ ನಡೆಸಿದರು.