ಬಳ್ಳಾರಿ: ಜನರು ಸತ್ತರೂ ಬಳ್ಳಾರಿಗೆ ಜಮೀರ್ ಬರೋದಿಲ್ಲ ಎಂದು ಮಾಜಿ ಸಚಿವ ಬಿ.ರಾಮುಲು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್ ಜಿಲ್ಲೆಗೆ ಬಂದಿಲ್ಲ. ಟೈಂ ಪಾಸ್ ಮಾಡೋಕೆ ಬಳ್ಳಾರಿ ಉಸ್ತುವಾರಿ ಜಮೀರ್ ಬರುತ್ತಿದ್ದಾರೆ.. ಜನರು ಸತ್ತರೂ ಬಳ್ಳಾರಿಗೆ ಜಮೀರ್ ಬರೋದಿಲ್ಲ. ಬೆಂಗಳೂರು ಬಿಟ್ಟು ಜಮೀರ್ ಬಳ್ಳಾರಿಗೆ ಬರಲ್ಲ.
Advertisement
ಏನಾದ್ರೂ ಇದ್ದರೆ ಹೊಡೆದು ಕೊಂಡು ಹೋಗೋಕೆ ಜಮೀರ್ ಬಳ್ಳಾರಿಗೆ ಬರ್ತಾರೆ ಎಂದು ವಾಗ್ದಾಳಿ ನಡೆಸಿದರು. ಐವಿ ದ್ರಾವಣದಿಂದ ಸಾವಾಗಿದೆ, ಬಳ್ಳಾರಿಯಲ್ಲೂ 5 ಜನ ಸಾವಾಗಿದೆ. ಬ್ಯಾನ್ ಆದ ಔಷಧಿ ಪುನಃ ಖರೀದಿ ಮಾಡ್ತಿದ್ದಾರೆ.. ಆರೋಗ್ಯ ಮಂತ್ರಿ ಹಾಗೂ ಸಿಎಂ ಸಿದ್ದರಾಮಯ್ಯ ಜವಾಬ್ದಾರಿ ವಹಿಸಿಕೊಳ್ತಿಲ್ಲ. ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ನೀಡಬೇಕು ಸಾವಿನ ತನಿಕೆ CBI ವಹಿಸಬೇಕು ಎಂದು ಆಗ್ರಹಿಸಿದರು.