ಬಿಗ್ಬಾಸ್ ಫಿನಾಲೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಬಿಗ್ಬಾಸ್ಗೆ ಬಂದ ಮೊದಲ ದಿನದಿಂದ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಮಧ್ಯೆ ಉತ್ತಮ ಬಾಂಧವ್ಯ ಇತ್ತು. ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಭವ್ಯಾ ತ್ರಿವಿಕ್ರಮ್ ಅವರನ್ನು ಕೇಳುತ್ತಾರೆ. ಟಾಸ್ಕ್ ಮೂಗಿಸಿದ ಬಳಿಕವು ಮತ್ತೆ ಭವ್ಯಾ ತ್ರಿವಿಕ್ರಮ್ ಕುಳಿತುಕೊಂಡು ಮಾತಾಡುತ್ತಾರೆ.
ಜೊತೆಗೆ ಅವರಿಗೆ ಬಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ಆದ್ರೆ ಸೆಮಿ ಫಿನಾಲೆ ಹೊತ್ತಲ್ಲೇ ಭವ್ಯಾ ವಿರುದ್ಧ ತ್ರಿವಿಕ್ರಮ್ ತಿರುಗಿ ಬಿದ್ದಿದ್ದಾರೆ. ನಿನ್ನ ಬಂಡವಾಳ ಬಯಲಾಯ್ತು ಪುಂಗಬೇಡ ಅಂತ ಭವ್ಯಾ ವಿರುದ್ಧ ತ್ರಿವಿಕ್ರಮ್ ಗುಡುಗಿದ್ದಾರೆ.
ಯಾರು ಯಾರನ್ನ ಹಿಂದಿಕ್ಕಿ ಮುಂದೆ ಹೋಗಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಕುರಿತು ಇಬ್ಬರ ನಡುವೆ ಬಿರುಸಿನ ಚರ್ಚೆ ನಡೆದಿದೆ. 105 ದಿನಗಳಿಂದ ಇರದಿದ್ದ ಬಾಂಡಿಂಗ್ ಈಗ ಇನ್ನೊಬ್ಬರ ಜೊತೆ ಸೇರಿಕೊಂಡು ಆಚೆ ಇಡುತ್ತಿದ್ದೀಯ. ತುಂಬಾ ಬಂಡವಾಳಗಳು ಗೊತ್ತಾದಾಗ ಯಾರು ಏನು ಮಾಡೋಕೆ ಆಗಲ್ಲ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಭವ್ಯಾ ನೀನು ಏನೇನೋ ತಲೆಗೆ ಹಾಕ್ಕೊಂಡು ಮಾತನಾಡಬೇಡ. ನೀವೇ ಹಾಳಾಗುತ್ತಿದ್ದೀರಾ ಅಷ್ಟೇ ಎಂದು ಭವ್ಯಾ ಉತ್ತರಿಸಿದ್ದಾರೆ. ಈ ವೇಳೆ ತ್ರಿವಿಕ್ರಮ್, ನೀನೇನು ನನಗೆ ಹೇಳುವುದು. ಇಷ್ಟೆಲ್ಲಾ ಪುಂಗೋ ಅವಶ್ಯಕತೆ ಇಲ್ಲ ಎಂದ ತ್ರಿವಿಕ್ರಮ್‌ಗೆ ನಿನ್ನ ಫ್ರೆಂಡ್‌ಶಿಪ್ ಅನ್ನು ಎಲ್ಲೂ ನಾನು ಬಳಸಿಕೊಂಡಿಲ್ಲ ಎಂದಿದ್ದಾರೆ.
ಮೊದಲ ದಿನ ಇದ್ದ ಹಾಗೇ ಈಗ ನೀನಿಲ್ಲ ಎಂದು ಭವ್ಯಾಗೆ ನೇರವಾಗಿಯೇ ಹೇಳಿದ್ದಾರೆ. ತ್ರಿವಿಕ್ರಮ್ ಹಾಗೂ ಭವ್ಯಾ ಇಬ್ಬರು ಸೋಫಾ ಮೇಲೆ ಕುಳಿತು ಈ ರೀತಿಯಾಗಿ ಮಾತನಾಡಿದ್ದಾರೆ. ಇದರಿಂದ ಬೇಸರ ಮಾಡಿಕೊಂಡ ಭವ್ಯಾ ಎದ್ದು ಹೋಗಿದ್ದಾರೆ.