ವರಮಹಾಲಕ್ಷ್ಮಿ ಹಬ್ಬ ಮುಗಿದರೂ ಕೈ ಸೇರದ ಗೃಹಲಕ್ಷ್ಮಿ ಹಣ..! ಮಹಿಳೆಯರ ಆಕ್ರೋಶ

0
Spread the love

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಈ ಯೋಜನೆಯಡಿ ಪ್ರತಿಯೊಂದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಲಾಗುತ್ತದೆ. ಮಹಿಳಾ ಸಬಲೀಕರಣದ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆ ಕಳೆದ ಮೂರು ತಿಂಗಳಿನಿಂದ ಸ್ಟಾಪ್ ಆಗಿದೆ.

Advertisement

ವರಮಹಾಲಕ್ಷ್ಮಿ ಹಬ್ಬಕ್ಕೆ ಗೃಹಲಕ್ಷ್ಮಿ ಹಣ ಬರುತ್ತೆ ಎಂದು ಖುದ್ದು ಸಚಿವ ಲಕ್ಷ್ಮೀ ಹೆಬ್ಬಾಳ್ಕರ್​ ಭರವಸೆ ನೀಡಿದ್ದರು. ಹೀಗಾಗಿ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಸಹ ಹಣ ಬರುತ್ತೆ ಎನ್ನುವ ಕಾತರದಲ್ಲಿದ್ದರು. ಆದ್ರೆ ಹಬ್ಬ ಮುಗಿದು ನಾಲ್ಕೈದು ದಿನ ಕಳೆಯಿತು. ಹಣ ಮಾತ್ರ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಹೀಗಾಗಿ ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಸ್ಟಾಪ್ ಆಗಿದೆ.‌ ವರಮಹಾಲಕ್ಷ್ಮಿ ಹಬ್ಬಕ್ಕಾದರೂ ಹಣ ಬರಬಹುದು ಅಂತ ಗೃಹಿಣಿಯರು ಕಾಯುತ್ತಿದ್ದರು. ಆದ್ರೆ ಹಣ ಮಾತ್ರ ಬರಲೇ ಇಲ್ಲ. ಪ್ರತಿದಿನ ಖಾತೆಗೆ ಹಣ ಬಂದಿದ್ಯಾ ಇಲ್ವಾ – ಅಂತ ಕಳೆದ 15 ದಿನಗಳಿಂದ ಗೃಹಲಕ್ಷ್ಮೀ ಫಲಾನುಭವಿಗಳು ಪ್ರತಿದಿನ ಬ್ಯಾಂಕಿಗೂ- ಮನೆಗೂ ಅಲೆದಾಡುತ್ತಿದ್ದಾರೆ. ಆದ್ರೆ ಎಷ್ಟೇ ಬ್ಯಾಂಕ್ ಗಳಿಗೆ ಎಷ್ಟೇ ಅಲೆದ್ರು ಹಣ ಮಾತ್ರ ಖಾತೆಗೆ ಬಂದಿಲ್ಲ. ಹೀಗಾಗಿ ಸರ್ಕಾರದ ವಿರುದ್ದ ಮಹಿಳೆಯರು ಬೇಸರಗೊಂಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here