ರಾಮನಗರ: ಪ್ರತಿಯೊಬ್ಬ ಭಾರತೀಯರು ಕೂಡ ಪ್ರಧಾನಿಯ ಕಾರ್ಯವನ್ನು ಮೆಚ್ಚಿದ್ದಾರೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಾಂತಿ ಜಪ ಎಂಬ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಮಾತನಾಡಿದ ಅವರು,
Advertisement
ಅವರ ಪೋಸ್ಟ್‌ನಿಂದಾಗಿ ಕಾಂಗ್ರೆಸ್ ಮನಸ್ಥಿತಿಯನ್ನು ನಾವು ಅಳೆಯಬಹುದು. ಕಾಂಗ್ರೆಸ್ ನವರಿಗೆ ಏನು ಶಾಂತಿ ಬೇಕಂತೆ? ಇನ್ನೆಷ್ಟು ದಿನ ಭಾರತೀಯರು ಶಾಂತಿಯಿಂದ ಇರಬೇಕು.
ಪ್ರತಿಯೊಬ್ಬ ಭಾರತೀಯರು ಕೂಡ ಪ್ರಧಾನಿಯ ಕಾರ್ಯವನ್ನು ಮೆಚ್ಚಿದ್ದಾರೆ. ಪ್ರತಿಯೊಬ್ಬರ ಮನಸ್ಸಿನಲ್ಲೂ ಆಕ್ರೋಶ ಇದೆ, ಒಳಗಡೆ ನೋವಿದೆ. ಅದಕ್ಕೆ ಪ್ರಧಾನಮಂತ್ರಿಗಳು ಉತ್ತರ ಕೊಡಬೇಕು ಎಂದು ಕೇಳಿದ್ದೆವು. ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಆಪರೇಷನ್ ಸಿಂಧೂರದ ಜವಾಬ್ದಾರಿಯನ್ನು ಇಬ್ಬರು ವೀರ ಮಹಿಳೆಯ ಹೊತ್ತಿದ್ದಾರೆ ಎಂದರು.