ತುಮಕೂರು: ರಾತ್ರೋ ರಾತ್ರಿ ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 80 ಅಡಿಕೆ ಸಸಿಗಳನ್ನು ನಾಶ ಮಾಡಿರುವ ಘಟನೆ ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಹಾಗಲವಾಡಿ ಬಳಿಯ ಶಿವರಾಂಪುರ ಗ್ರಾಮದಲ್ಲಿ ನಡೆದಿದೆ.
Advertisement
80 ಅಡಿಕೆ ಸಸಿಗಳನ್ನ ಕಳೆದುಕೊಂಡು ರೈತ ತಿರುಮಲ್ಲಯ್ಯ ಕಣ್ಣೀರಿಟ್ಟಿದ್ದು, ಒಂದೇ ರಾತ್ರಿಯಲ್ಲಿ 80 ಅಡಿಕೆ ಸಸಿಗಳನ್ನ ಕಡಿದು ಹಾಕಿದ್ದಾರೆ. ಈ ಹಿಂದೆಯೂ ಮೆಡಿಸಿನ್ ಸೌತೆಕಾಯಿ ಬೆಳೆಯನ್ನು ನಾಶ ಮಾಡಿದ್ದರು.
ದೂರು ನೀಡಿದ್ದರೂ ಚೇಳೂರು ಪೊಲೀಸ್ ಠಾಣೆಯವರು ಯಾರನ್ನೂ ಬಂಧಿಸಿರಲಿಲ್ಲ. ಇತ್ತೀಚೆಗಷ್ಟೇ ನಾಲ್ಕು ಲಕ್ಷ ಸಾಲ ಮಾಡಿ ಬೋರ್ ವೆಲ್ ಮಾಸಿದ್ದರು. ಆದರೆ ಇದೀಗ ಅಡಿಕೆ ಸಸಿ ನಾಶ ಆಗಿರೋದನ್ನ ನೋಡಿ ತಿರುಮಲಯ್ಯ ಕಂಗಾಲಾಗಿದ್ದಾರೆ.