ವಿಜಯಸಾಕ್ಷಿ ಸುದ್ದಿ, ಗದಗ : ಮಾರ್ಚ್ 25ರಿಂದ ಪ್ರಾರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೋಣ ಬೆಳವಣಿಕಿ ಗ್ರಾಮದ ಶ್ರೀ ವೀರಭದ್ರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ನಿರ್ದೇಶಕ ಪ್ರಕಾಶ್ ಹಕ್ಕಾಪಕ್ಕಿಯವರ ಕೋರಿಕೆಯ ಮೇರೆಗೆ ಶ್ರೀ ವೀರಭದ್ರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕಾಲೇಜಿನ ಆವರಣದಲ್ಲಿ ಯಾವುದೇ ಅಹಿತಕರ ಘಟನೆಗಳು ಉಂಟಾಗದ ಹಾಗೆ ಪೊಲೀಸ್ ಬಿಗಿ ಬಂದೋಬಸ್ತ್ ನೊಂದಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಅವರ ನೇತೃತ್ವದಲ್ಲಿ ಮಾಜಿ ಸೈನಿಕರು ಬಂದೋಬಸ್ತ್ ಕಾರ್ಯಕ್ಕೆ ಕೈಜೋಡಿಸಿದರು.
ಪರೀಕ್ಷೆಯ ಸಂದರ್ಭದಲ್ಲಿ ರೋಣ ಪೊಲೀಸ್ ಠಾಣೆಯ ಪಿಎಸ್‌ಐ ಜೂಲಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾಲೇಜಿಗೆ ಆಗಮಿಸಿ ಮಾಜಿ ಸೈನಿಕರ ಶಿಸ್ತಿನ ಕಾರ್ಯವನ್ನು ವೀಕ್ಷಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಬಿಗಿ ಭದ್ರತೆಗೆ ಸಹಕರಿಸಿದ ಮಾಜಿ ಸೈನಿಕರಿಗೆ ಕಾಲೇಜಿನ ನಿರ್ದೇಶಕ ಪ್ರಕಾಶ್ ಹಕ್ಕಾಪಕ್ಕಿ ಮತ್ತು ಕಾರ್ಯದರ್ಶಿ ಶಿರೋಳ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರ ಸಂಘದ ಬಸಲಿಂಗಪ್ಪ, ರೇಣುಕಗೌಡ ದಾನಪ್ಪಗೌಡ್ರ, ಕಳಕಪ್ಪ ಗಾರವಾಡ, ಚನ್ನಪ್ಪ ಬಾವಿ, ಶಶಿಧರ ವಕ್ಕರ್, ಮುತ್ತಪ್ಪ ಹಡಪದ, ಚಂದ್ರಶೇಖರಪ್ಪ ಬಿಳೆಯಲಿ, ಮುತ್ತಪ್ಪ ಹೊಸಮನಿ, ಸಂಗಪ್ಪ ತಳವಾರ, ಚೆನ್ನಪ್ಪ ಹೊಸಮನಿ ಸೇರಿದಂತೆ ಹಲವಾರು ಮಾಜಿ ಸೈನಿಕರು ಉಪಸ್ಥಿತರಿದ್ದರು.