ರಾಯಚೂರು: ಮದ್ಯ ಮಳಿಗೆಗಳಲ್ಲಿ ಎಂಆರ್‌ಪಿ ದರದಲ್ಲಿ ಮಾತ್ರ ಮದ್ಯ ಮಾರಾಟ ಮಾಡುವುದು ಕಡ್ಡಾಯ. ಈ ನಿಯಮವನ್ನು ಉಲ್ಲಂಘಿಸಿದ ರಾಯಚೂರಿನ ಹಲವು ಮದ್ಯ ಅಂಗಡಿಗಳ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸಿದೆ.
ರಾಜ್ಯದೆಲ್ಲೆಡೆ ಮದ್ಯ, ವಿಶೇಷವಾಗಿ ಬಿಯರ್ ಮಾರಾಟ ಕುಂಠಿತವಾಗಿರುವ ಹಿನ್ನೆಲೆಯಲ್ಲಿ, ಅಬಕಾರಿ ಇಲಾಖೆ ಎಂಆರ್‌ಪಿ ದರದ ಪಾಲನೆ ಬಗ್ಗೆ ಕಡ್ಡಾಯವಾಗಿ ನಿಗಾ ಇಟ್ಟಿದೆ. ಮದ್ಯ ಮಳಿಗೆಗಳಿಗೆ ಎಂಆರ್‌ಪಿ ದರದ ಸ್ಟಿಕ್ಕರ್‌ಗಳನ್ನು ಅಂಟಿಸುವ ಕ್ರಮ ಕೈಗೊಳ್ಳಲಾಗಿದ್ದು, ಇದು ಮದ್ಯಪ್ರಿಯರಿಗೆ ಸಂತೋಷ ತಂದಿದೆ.
ಸಿಎಲ್-2 ಅಡಿಯಲ್ಲಿ ಬರುವ ವೈನ್ ಶಾಪ್‌ಗಳು ಮತ್ತು ಎಂಎಸ್‌ಐಎಲ್ ಸಂಸ್ಥೆಯ ಸಿಎಲ್-11(ಸಿ) ಅಡಿಯಲ್ಲಿ ಬರುವ ಮಳಿಗೆಗಳಲ್ಲಿ ಎಂಆರ್‌ಪಿ ದರ ಕಡ್ಡಾಯವಾಗಿದೆ. ಎಂಆರ್‌ಪಿಗಿಂತ ಹೆಚ್ಚು ದರ ವಸೂಲಿ ಮಾಡಿದರೆ ಗ್ರಾಹಕರು ದೂರು ನೀಡುವಂತೆ ಇಲಾಖೆ ಮನವಿ ಮಾಡಿದೆ.ರಾಯಚೂರಿನ ಅನೇಕ ಅಂಗಡಿಗಳಲ್ಲಿ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಪತ್ತೆಯಾಗಿದ್ದು, ನಿಯಮ ಉಲ್ಲಂಘನೆ ವಿರುದ್ಧ ಅಬಕಾರಿ ಇಲಾಖೆ ಕ್ರಮ ಕೈಗೊಂಡಿದೆ.