HomeGadag Newsಯುವಕರು ದೇಶದ ಇತಿಹಾಸ ಅರಿಯಿರಿ : ಡಾ. ಎಚ್.ಕೆ. ಪಾಟೀಲ

ಯುವಕರು ದೇಶದ ಇತಿಹಾಸ ಅರಿಯಿರಿ : ಡಾ. ಎಚ್.ಕೆ. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರಗುಂದ : ತಾಲೂಕಿನ ಕೊಣ್ಣೂರ ಗ್ರಾಮದ ಶ್ರೀ ಪರಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಗಳ ನಿಮಿತ್ತ ಗದುಗಿನ ಚಿತ್ರ ಕಲಾವಿದ ಶಂಕರಗೌಡ ಪಾಟೀಲರು ಗ್ರಾಮದ ದೇವಸ್ಥಾನದ ಆವರಣದಲ್ಲಿ ರಾಜ್ಯದ ವಿವಿಧ ದೇವಸ್ಥಾಗಳ ಫೋಟೋ ಮತ್ತು ದೇವಸ್ಥಾನಗಳ ಪರಂಪರೆ ತಿಳಿಸುವ ಲೇಖನಗಳ ಪ್ರದರ್ಶನ ಏರ್ಪಡಿಸಿದ್ದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲರು ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿ, ನಾಡಿನ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಿತ್ರಕಲಾವಿದ ಶಂಕರಗೌಡ ಪಾಟೀಲರು ನಮ್ಮ ಭಾರತ ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ ಹಾಗೂ ರಾಜ್ಯದ, ದೇಶದ ಐತಿಹಾಸಿಕ ಪರಂಪರೆಯ ದೇವಸ್ಥಾನಗಳ ಛಾಯಾಚಿತ್ರ ಹಾಗೂ ಲೇಖನಗಳ ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯ.ಯುವಕರು ನಮ್ಮ ದೇಶದ ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಕೊಣ್ಣೂರ ಗ್ರಾಮದ ವಿರಕ್ತಮಠ ಶ್ರೀಗಳು, ಕಲ್ಮಠದ ಶ್ರೀಗಳು, ಶಾಸಕ ಸಿ.ಸಿ. ಪಾಟೀಲ, ರಾಜುಗೌಡ ಕೆಂಚನಗೌಡ್ರ, ಗ್ರಾ.ಪಂ ಅಧ್ಯಕ್ಷೆ ಸಿದ್ದವ್ವ ಬಸವರಾಜ ಕಳಕಣ್ಣವರ, ಶೇಖರಗೌಡ ನಿಂಗಪ್ಪ ವಜ್ರಂಗಿ, ಜಕ್ಕಪ್ಪನವರ, ಬಾಬುಗೌಡ್ರ, ಸೋಮಾಪೂರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!