ಮುಂಬೈ ಇಂಡಿಯನ್ಸ್ ತಂಡವು ಬ್ಯಾಕ್ ಟು ಬ್ಯಾಕ್ ಗೆಲುವುಗಳ ಮೂಲಕ ಇದೀಗ ಐಪಿಎಲ್ 2025ರ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನೂ 5 ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೆ ಪ್ಲೇಆಫ್ಗೆ ಪ್ರವೇಶಿಸಬಹುದು. ಇನ್ನೂ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಕರಿಯರ್‌ಗೆ ಮತ್ತೊಂದು ಗರಿ ಸೇರಿಸಿಕೊಂಡಿದೆ.
ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಬ್ಯಟಿಂಗ್ ಪ್ರದರ್ಶನ ತೋರಿದ ರೋಹಿತ್ ಶರ್ಮಾ ಟಿ-20 ಕ್ರಿಕೆಟ್‌ನಲ್ಲಿ 12,000 ರನ್‌ಗಳ ಮೈಲಿಗಲ್ಲು ತಲುಪಿದರು. ಆ ಮೂಲಕ ವಿರಾಟ್ ಕೊಹ್ಲಿ ಬಳಿಕ ಟಿ-20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡರು.
ಇದರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಪರ ಅತೀ ಹೆಚ್ಚು ಸಿಕ್ಸರ್ ಭಾರಿಸಿದ್ದ ಕಿರನ್ ಪೊಲಾರ್ಡ್ ದಾಖಲೆಯನ್ನು ಕೂಡ ಸರಿಗಟ್ಟಿದರು. ಪೋಲಾರ್ಡ್ ಅವರು, ಐಪಿಎಲ್‌ನಲ್ಲಿ ಮುಂಬೈ ಪರ 257 ಸಿಕ್ಸರ್ ಬಾರಿಸಿದ್ದರು. ಸದ್ಯ ಪಂದ್ಯದಲ್ಲಿ 4 ಸಿಕ್ಸರ್ ಬಾರಿಸುವ ಮೂಲಕ ಒಟ್ಟು 260 ಸಿಕ್ಸರ್ ಬಾರಿಸಿದ ಸಾಧನೆ ಮಾಡಿದರು.
37 ವರ್ಷದ ರೋಹಿತ್ ಶರ್ಮಾ 4ನೇ ಓವರ್‌ನಲ್ಲಿ ಜಯದೇವ್ ಉನಾದ್ಕತ್ ಎಸೆತದಲ್ಲಿ ಇನ್ನಿಂಗ್ಸ್‌ನ ಎರಡನೇ ಸಿಕ್ಸರ್ ಮತ್ತು 8ನೇ ಓವರ್‌ನಲ್ಲಿ ಇನ್ನೊಂದು ಸಿಕ್ಸರ್ ಬಾರಿಸುವ ಮೂಲಕ ಪೊಲಾರ್ಡ್ ಅವರನ್ನು ಹಿಂದಿಕ್ಕಿದರು.ಮಾತ್ರವಲ್ಲ ಹಿಟ್‌ಮ್ಯಾನ್ ಶರ್ಮಾ ಬ್ಯಾಕ್ ಟು ಬ್ಯಾಕ್ ಎರಡು ಅರ್ಧಶತಕ ಬಾರಿಸವ ಮೂಲಕ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಅವರು ಎಶಾನ್ ಮಾಲಿಂಗ ಅವರ ಬೌಲಿಂಗ್‌ನಲ್ಲಿ ಔಟಾದ ಮೊದಲು 46 ಎಸೆತಗಳಲ್ಲಿ 70 ರನ್ ಗಳಿಸಿದರು.