ಶಿವಮೊಗ್ಗ:-ಭದ್ರಾವತಿ ನಗರದ ಬೊಮ್ಮನಕಟ್ಟೆ ಬಡಾವಣೆಯ ಮೂಲೆಕಟ್ಟೆಯಲ್ಲಿ ಹಂದಿ ಶಿಕಾರಿಗೆಂದು ಇಟ್ಟಿದ್ದ ಸ್ಫೋಟಕ ಸಿಡಿದು ಹಸು ಮೃತಪಟ್ಟಿರುವ ಘಟನೆ ಜರುಗಿದೆ. 45 ವರ್ಷದ ಗುರು ಬಂಧಿತ ಆರೋಪಿ.
Advertisement
ಆರೋಪಿ ಗುರು ಹಂದಿ ಶಿಕಾರಿಗೆಂದು ಸಿಡಿಮದ್ದು ತಯಾರು ಮಾಡಿದ್ದನು. ಹಿಂದಿನ ದಿನ ಸಿಡಿಮದ್ದು ತಯಾರಿಸಿ ಒಣಗಲೆಂದು ತನ್ನ ಮನೆ ಪಕ್ಕದ ಮೈದಾನದ ಗುಂಡಿಯೊಳಗೆ ಇಟ್ಟಿದ್ದನು.
ಭಾನುವಾರದಂದು ಹಸು ಮೈದಾನಕ್ಕೆ ಮೇಯಲು ಬಂದಿತ್ತು. ಈ ವೇಳೆ ಹಸು ಕಾಲು ಜಾರಿ ಗುಂಡಿಯೊಳಗೆ ಬಿದ್ದಿದೆ. ಹಸು ಬಿದ್ದ ಕೂಡಲೆ ಸಿಡಿಮದ್ದು ಬ್ಲಾಸ್ಟ್ ಆಗಿ ಹಸು ಮೃತಪಟ್ಟಿದೆ. ಸ್ಪೋಟಕವನ್ನು ಪಟಾಕಿ ಮದ್ದು ಹಾಗೂ ಬೆಂಕಿ ಕಡ್ಡಿ ಮದ್ದು ಬಳಸಿ ಆರೋಪಿ ಗುರು ತಯಾರಿಸಿದ್ದ ಎಂದು ತಿಳಿದುಬಂದಿದೆ. ಭದ್ರಾವತಿ ಪೇಪರ್ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.