ವಿಜಯಸಾಕ್ಷಿ ಸುದ್ದಿ, ಡಂಬಳ: ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಮಹತ್ವದ ಹಂತವಾಗಿದೆ. ಪರೀಕ್ಷೆಯನ್ನು ಅತ್ಯಂತ ವಿಶ್ವಾಸ ಹಾಗೂ ಆತ್ಮಸ್ಥೈರ್ಯದಿಂದ ಎದುರಿಸಬೇಕು. ಯಾವುದೇ ವಿಷಯದ ಬಗ್ಗೆ ಗೊಂದಲಕ್ಕೆ ಒಳಗಾಗಬೇಡಿ, ಪರೀಕ್ಷಾ ಕೊಠಡಿಯಲ್ಲಿ ಸಮಚಿತ್ತದಿಂದ ಪ್ರಶ್ನೆ ಪತ್ರಿಕೆ ಓದಿ ಉತ್ತರಿಸಿದರೆ ಉತ್ತಮ ಅಂಕ ಗಳಿಸಬಹುದು ಎಂದು ರಾಜ್ಯ ಶಾಲಾ ಶಿಕ್ಷಣ ಇಲಾಖೆ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಡಿವಾಳರ ಹೇಳಿದರು.
ಡಂಬಳದ ಜಗದ್ಗುರು ತೋಂಟದಾರ್ಯ ಬಾಲಕ ಮತ್ತು ಬಾಲಕಿಯರ ಪ್ರೌಡಶಾಲೆಯ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಶಾಲಾ ಶಿಕ್ಷಣ ಇಲಾಖೆ, ಮುಂಡರಗಿ ತಾಲೂಕಾ ನೌಕರರ ಸಂಘದ ಪದಾಧಿಕಾರಿಗಳ ಸಂಘದಿಂದ ವಿದ್ಯಾರ್ಥಿಗಳಿಗೆ ಲೇಖನಿ ಮತ್ತು ಗುಲಾಬಿ ನೀಡಿ ಶುಭ ಹಾರೈಹಿಸಿ ಮಾತನಾಡಿ, ಪ್ರಾಮಾಣಿಕವಾಗಿ, ಧೈರ್ಯದಿಂದ ಪರೀಕ್ಷೆ ಎದುರಿಸಬೇಕು. ವಿನಾಕಾರಣ ಭಯ ಬೇಡ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎನ್. ಕಲ್ಲಿಗನೂರ ಮಾತನಾಡಿ, ವಾರ್ಷಿಕ ಪರೀಕ್ಷೆಯನ್ನು ಭಯಮುಕ್ತರಾಗಿ ಜಾಣ್ಮೆಯಿಂದ ಎದುರಿಸುವ ಕಲೆ ರೂಢಿಸಿಕೊಳ್ಳಬೇಕು. ಇದರಿಂದ ಶಾರೀರಿಕ ಮತ್ತು ಮಾನಸಿಕ ಚೈತನ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಈ ಪರೀಕ್ಷೆ ಪ್ರಮುಖ ಪಾತ್ರ ವಹಿಸಲಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವ ಮೂಲಕ ಶಾಲೆ, ಗ್ರಾಮಕ್ಕೆ ಉತ್ತಮ ಹೆಸರು ತರಬೇಕೆಂದು ಹೇಳಿದರು.
ಸಂಘದ ಕಾರ್ಯದರ್ಶಿ ಸಂತೋಷ ನಿಂಗಾಪೂರ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ದುರ್ಗಾಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಂಜೋತ ಸಂಕಣ್ಣವರ, ಸಂಘದ ಜಿಲ್ಲಾ ಪರಿಷತ್ ಸದಸ್ಯ ಬಸವಣ್ಣೆಪ್ಪ ಬಿ.ಜಿ, ಖಜಾಂಚಿ ಗೀತಾ ಚನ್ನಪ್ಪಗೌಡರ, ಹಿರಿಯ ದೈಹಿಕ ಶಿಕ್ಷಕರಾದ ಉಮೇಶ ಗಡ್ಡಿ, ಸಹ ಶಿಕ್ಷಕರಾದ ಎ.ಬಿ. ಬೇವಿನಕಟ್ಟಿ, ಎಸ್.ಎಂ. ಹಂಚಿನಾಳ, ಹೇಮಂತ ಬೇವಿನಕಟ್ಟಿ, ಆನಂದ ಶಿವನಗೌಡರ, ಯರಗುಡಿ, ವಿ.ಬಿ. ವಿಭೂತಿ, ಸುನೀಲ ತಿಮ್ಮಾಪೂರ, ಎಂ.ಎಂ. ಗೌಳೆರ ಹಾಗೂ ವಿದ್ಯಾರ್ಥಿನಿಯರು ಇದ್ದರು.