RCB ಯಿಂದ ಹೊರ ನಡೆದ ಫಾಫ್, ಮ್ಯಾಕ್ಸ್ ವೆಲ್: ಫ್ಯಾನ್ಸ್ ಶಾಕ್!

0
Spread the love

ದೇಶದಾದ್ಯಂತ IPL ಮೆಗಾ ಹರಾಜು ವಿಚಾರ ಬಹಳ ಚರ್ಚೆ ನಡೆಯುತ್ತಿದೆ. ಈ ಹೊತ್ತಲ್ಲೇ RCB ಅಭಿಮಾನಿಗಳಿಗೆ ಶಾಕಿಂಗ್ ವಿಚಾರ ಹೊರ ಬಿದ್ದಿದೆ.

Advertisement

ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದ್ದು, ಆರ್‌ಸಿಬಿ ಫ್ಯಾನ್ಸ್‌ಗೆ ಆಘಾತ ನೀಡಿದೆ.

ಕಳೆದ ಐಪಿಎಲ್‍ನಲ್ಲಿ ಫಾಫ್ ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಮ್ಯಾಕ್ಸ್‌ವೆಲ್ ನಿರೀಕ್ಷೆಯ ಪ್ರಕಾರ ಪ್ರದರ್ಶನ ನೀಡಿರಲಿಲ್ಲ. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರಿ ವಿಫಲರಾದರು. ಆದರೂ ತಂಡದ ಯಶಸ್ಸಿನಲ್ಲಿ ಇಬ್ಬರೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.

ಇಬ್ಬರು ಆಟಗಾರರ ಕೈಬಿಟ್ಟ ಬಳಿಕ ತಂಡಕ್ಕೆ ಕೆ.ಎಲ್ ರಾಹುಲ್ ಸೇರ್ಪಡೆಯಾಗಬಹುದು ಎಂದು ವರದಿ ಪ್ರಕಟವಾಗಿದ್ದರೂ ಹರಾಜು ನಡೆಯುವ ವೇಳೆ ಅಧಿಕೃತವಾಗಿ ತಿಳಿದು ಬರಲಿದೆ.

ಅದೇನೇ ಇರಲಿ ಫಾಫ್ ಮತ್ತು ಮ್ಯಾಕ್ಸ್ ವೆಲ್ ಅವರನ್ನು ಕೈ ಬಿಡುವ ನಿರ್ಧಾರ ಫ್ಯಾನ್ಸ್ ಒಪ್ಪುತ್ತಿಲ್ಲ.


Spread the love

LEAVE A REPLY

Please enter your comment!
Please enter your name here