ಸೊಂಟದ ಬೊಜ್ಜು ಕರಗಿಸಲು ವಿಫಲರಾಗಿದ್ದೀರಾ!? ಡೋಂಟ್ ವರಿ ಈ ಸರಳ ಟಿಪ್ಸ್ ಫಾಲೋ ಮಾಡಿ!

0
Spread the love

ಯಾವುದಾದರೂ ಫಂಕ್ಷನ್​ಗೆ ಹೋದಾಗ ಸಂಬಂಧಿಕರ ಹೆಂಗಸು ಸ್ವಲ್ಪ ತೆಳ್ಳಗಿದ್ದರೂ ಆಕೆಯನ್ನು ಪಕ್ಕಕ್ಕೆ ಕರೆದು, ‘ತೆಳ್ಳಗಾಗೋಕೆ ಏನ್ರೀ ಮಾಡಬೇಕು? ತಿನ್ನೋದೆಲ್ಲ ಎಷ್ಟೇ ಕಡಿಮೆ ಮಾಡಿದರೂ ಹೊಟ್ಟೆ ಮಾತ್ರ ಇಳಿತಾ ಇಲ್ಲ ಕಣ್ರಿ. ಸುಲಭವಾಗಿ ಬೊಜ್ಜು ಕರಗಬೇಕೆಂದ್ರೆ ಏನು ಮಾಡ್ಬೇಕು? ನೀವು ಹೇಗೆ ಇಷ್ಟು ಸಣ್ಣಗಾದ್ರಿ?’ ಎಂದು ಕೇಳದೆ ಸುಮ್ಮನೆ ಕೂರುವ ಜಾಯಮಾನ ಮಹಿಳೆಯರದ್ದು ಅಲ್ಲವೇ ಅಲ್ಲ.

Advertisement

ತೂಕ ಹೆಚ್ಚಾಗುವುದು ಇಂದಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ. ಜನರು ತೂಕ ಇಳಿಸಿಕೊಳ್ಳಲು ಏನೆಲ್ಲಾ ಮಾಡಲು ಮುಂದಾಗುತ್ತಾರೆ, ಜಿಮ್‌ನಿಂದ ಹಿಡಿದು ತಮ್ಮ ಆಹಾರಕ್ರಮದ ಬೆಂಬಲವನ್ನು ಸಹ ಅವರು ಪಡೆದುಕೊಳ್ಳುತ್ತಾರೆ. ಹಾಗಿದ್ರೆ ಇಂದಿನ ಲೇಖನದಲ್ಲಿ ನಾವು ಸೊಂಟದ ಬೊಜ್ಜು ಕರಗಿಸಲು ಉಪಯುಕ್ತವಾಗುವ ಈ ಒಣಹಣ್ಣಿನ ಬಗ್ಗೆ ಈಗ ತಿಳಿಯೋಣ.

ಅಂಜೂರದ ನಿಯಮಿತ ಸೇವನೆಯು ರಕ್ತದೊತ್ತಡ ಮತ್ತು ವಯಸ್ಸಾಗುವಿಕೆಯನ್ನು ನಿಯಂತ್ರಿಸುತ್ತದೆ. ಅಂಜೂರವು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಅಂಜೂರವು ಹೃದಯದ ಆರೋಗ್ಯಕರ ಆಹಾರವಾಗಿದೆ. ಅಂಜೂರದ ಹಣ್ಣುಗಳು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಂಜೂರವನ್ನು ಮಧುಮೇಹಿಗಳು ಸೇವಿಸಬಹುದು ಏಕೆಂದರೆ ಅವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತವೆ.

ಅಂಜೂರವು ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ಅಂಜೂರವು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಅಂಜೂರದ ಹಣ್ಣು ತಿಂದರೆ ಸಮಸ್ಯೆ ಕಡಿಮೆಯಾಗುತ್ತದೆ. ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ. ಮಧುಮೇಹ ಇರುವವರು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ.

ಅಂಜೂರದಲ್ಲಿ ಸತು, ಮೆಗ್ನೀಸಿಯಮ್ ಮತ್ತು ಕಬ್ಬಿಣದ ಸಮೃದ್ಧವಾಗಿದೆ. ಅಂಜೂರವು ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಋತುಬಂಧದ ನಂತರದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ವಿಶೇಷವಾಗಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದು ದೇಹದಲ್ಲಿನ ಹಾರ್ಮೋನ್ ಬದಲಾವಣೆಗಳಿಗೆ ತುಂಬಾ ಒಳ್ಳೆಯದು.

ಅಂಜೂರದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪೊಟ್ಯಾಸಿಯಮ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ವಿಶೇಷವಾಗಿ ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಒಮೆಗಾ 6 ಕೊಬ್ಬಿನಾಮ್ಲ ಮತ್ತು ಫೀನಾಲ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಅಂಜೂರದ ಹಣ್ಣುಗಳನ್ನು ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ಅಲ್ಲದೆ, ಆ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಇದು ಚರ್ಮವನ್ನು ಹಗುರಗೊಳಿಸುತ್ತದೆ. ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಎ ಕೂಡ ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ. ಅಂಜೂರವು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದರಿಂದ ತ್ವಚೆಯು ಕಿರಿಯ ಹಾಗೂ ಕಾಂತಿಯುತವಾಗಿ ಕಾಣುತ್ತದೆ


Spread the love

LEAVE A REPLY

Please enter your comment!
Please enter your name here