ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಲಕ್ಷ ರೂ. ಮೌಲ್ಯದ ನಕಲಿ ಸಿಗರೇಟ್ ಬಾಕ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದು, ಐದು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಬ್ದುಲ್ ಬಷೀದ್, ಅವರ ಮಗ ಮೊಹಮದ್ ಅಶೀಕ್ ಸೇರಿದಂತೆ ಮಹಮದ್ ಅನ್ಸರ್, ಮಹಮದ್ ಅನ್ಸಾರಿ ಹಾಗೂ ಗುಲಾಮ್ ಹುಸೇನ್ ಖಾನ್ ಎಂದು ಗುರುತಿಸಲಾಗಿದೆ.
ನಕಲಿ ಸಿಗರೇಟ್ ಜಾಲದ ಬಗ್ಗೆ ಅನ್ವೇಷ್ ಐಪಿಆರ್ ಸಂಸ್ಥೆ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ಐಟಿಸಿ ಹಾಗೂ ಎಸ್ಸೆ ಸಂಸ್ಥೆಗಳ ನಕಲಿ ಸಿಗರೇಟ್‌ಗಳನ್ನು ವಿದೇಶಗಳಿಂದ ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ ಐವರನ್ನ ಬಂಧಿಸಿರುವ ಪೊಲೀಸರು, ವಶಪಡಿಸಿಕೊಂಡ ನಕಲಿ ಸಿಗರೇಟ್‌ಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



