ಮಡಿಕೇರಿ:- ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಿದ ಕೆಲ ಯೂಟ್ಯೂಬರ್‌ಗಳ ವಿರುದ್ಧ ಕೊಡಗಿನಲ್ಲೂ ಸಿಡಿದೆದ್ದ ಭಕ್ತಾದಿಗಳು, ದಿಢೀರ್ ಪ್ರತಿಭಟನೆ ಮಾಡಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿ ಸೇರಿದ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಸಂಘಟನೆಯ ಸದಸ್ಯರು, ಅಪಪ್ರಚಾರ ನಡೆಸುತ್ತಿರುವವರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಧರ್ಮಸ್ಥಳದಲ್ಲಿ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆ ತನಿಖೆ ಪೂರ್ಣಗೊಳ್ಳುವವರೆಗೆ ಎಲ್ಲರೂ ತಾಳ್ಮೆಯಿಂದ ಇರಬೇಕಾಗುತ್ತದೆ. ಆದ್ರೆ ಕೆಲವರು ಶ್ರೀಕ್ಷೇತ್ರದ ಬಗ್ಗೆ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೇ ಹಿಂದೂ ದೇವಾಲಯದ ಮೇಲೆ ಬೌದ್ಧಿಕ ದಾಳಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗಿರೀಶ ಮಟ್ಟಣ್ಣನವರ್ ಕೇವಲವಾಗಿ ಮಾತನಾಡುತ್ತಾ ಕೆಸರೆರಚುವ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೂ ಭಕ್ತರ ಮೌನಕ್ಕೆ ಅವಕಾಶ ಇಲ್ಲ. ಭಕ್ತವೃಂದ ಎದ್ದು ನಿಂತಿದೆ. ಸುಳ್ಳು ಆರೋಪ ಮಾಡುವ ಯೂಟೂಬರ್‌ಗಳನ್ನ ಕೂಡಲೇ ಬಂಧಿಸಬೇಕು ಎಂದು ಅಕ್ರೋಶ ಹೊರಹಾಕಿದ್ದಾರೆ.