ರಾಮನಗರ: ತನ್ನ ಪ್ರೀತಿಗೆ ಪೋಷಕರು ಒಪ್ಪಲಿಲ್ಲವೆಂದು ರಾಮನಗರದ ಕಾಯಿಸೊಪ್ಪಿನ ಬೀದಿಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ನಹತ್ಯೆಗೆ ಶರಣಗಿರುವ ಘಟನೆ ನಡೆದಿದೆ. ಯಶವಂತ್ (24) ಮೃತ ಯುವಕನಾಗಿದ್ದು, ಮೋನಿಕಾ ಎಂಬಾಕೆಯನ್ನು ಮೃತ ಯುವಕ ಯಶವಂತ್ ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿಗೆ ಮನೆಯವರು ಸಮ್ಮತಿ ನೀಡಿರಲಿಲ್ಲ.
ಇದೇ ವಿಚಾರಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ಯುವತಿ ಕೂಡ ಚಾಕುವಿನಿಂದ ಇರಿದುಕೊಂಡು ಸಾಯಲು ಯತ್ನಿಸಿದ್ದಾಳೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಆಕೆಯನ್ನು ಬಿ.ಎಂ.ರಸ್ತೆಯಲ್ಲಿರುವ ರಾಮಕೃಷ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



