ಕಲಬುರಗಿ: ಕೌಟುಂಬಿಕ ಕಲಹದಿಂದ ಪತ್ನಿ ಇಬ್ಬರು ಮಕ್ಕಳನು ಕೊಲೆ ಮಾಡಿ ಗಂಡ ನೇಣಿಗೆ ಶರಣಾಗಿರುವ ಘಟನೆ ಕಲಬುರಗಿಯ ಗಾಬ್ರೆ ಲೇಔಟ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಸಂತೋಷ್ ಕೊರಳ್ಳಿ(45) ಮೂವರ ಕೊಲೆ ಮಾಡಿ ನೇಣು ಹಾಕಿಕೊಂಡ ವ್ಯಕ್ತಿಯಾಗಿದ್ದು, ಪತ್ನಿ ಶೃತಿ (35) ಮಕ್ಕಳಾದ ಮನೀಶ್(9) ಮೂರು ತಿಂಗಳ ಮಗು ಅನೀಶ್’ನನ್ನು ಕೊಲೆ ಮಾಡಿದ್ದಾನೆ.
ಜೆಸ್ಕಾಂ ನಲ್ಲಿ ಅಕೌಂಟ್ ವಿಭಾಗದಲ್ಲಿ ಸಂತೋಷ ಕೊರಳ್ಳಿ ಕೆಲಸ ಮಾಡುತ್ತಿದ್ದರು. ಕಲಬುರಗಿ ನಗರದ ಗಾಬರೆ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿರುವ ತಮ್ಮ ಫ್ಲ್ಯಾಟ್ನಲ್ಲಿ ಸಂಜೆ ಆಫೀಸ್ನಿಂದ ಬುರತ್ತಿದ್ದಂತೆಯೇ ಪತ್ನಿ ಜೊತೆ ಕಿರಿಕ್ ತೆಗೆದಿದ್ದ ಸಂತೋಷ್,
ನೋಡ ನೋಡುತ್ತಿದ್ದಂತಯೇ ಪತ್ನಿ ಇಬ್ಬರು ಮಕ್ಕಳ್ಳನ್ನ ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ ಪರಿಶೀಲನೆ ನಡೆಸಿದ್ದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.