ಚನ್ನಪಟ್ಟಣ: ಕೌಟುಂಬಿಕ ಕಲಹ ಹಿನ್ನಲೆ ಪತಿಯೇ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಚನ್ನಪಟ್ಟಣ ನಗರದ ತುಳಸಿ ತೋಟದ ಬೀದಿಯಲ್ಲಿ ನಡೆದಿದೆ. ಶ್ವೇತ (೩೨ ವರ್ಷ) ಗಂಭೀರವಾಗಿ ಗಾಯಗೊಂಡಿರುವ ಪತ್ನಿಯಾಗಿದ್ದು, ಚನ್ನಪಟ್ಟಣ ಸಾರ್ವಜನಿಕರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು,
Advertisement
ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ಅರವಿಂದ ಚಾಕು ಇರುದ ಪತಿಯಾಗಿದ್ದು, ಗಂಡನನ್ನು ಬಿಟ್ಟು ಮೂರು ವರ್ಷದಿಂದ ಪತ್ನಿ ಬೇರೆ ಇದ್ದಿದ್ದಾರೆ. ಕುಡಿದು ಪತ್ನಿಗೆ ಚಾಕುವಿನಿಂದ ಇರಿದ ಗಂಡನನ್ನು ಪೋಲೀಸರು ವಶಕ್ಕೆ ಪಡೆದು ಚನ್ನಪಟ್ಟಣ ಪೂರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.