ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆದು ಹೋಗಿದ್ದು, ಉತ್ತರ ಕರ್ನಾಟಕದ ಹುಲಿ ಖ್ಯಾತಿಯ ಹಾಡುಗಾರ ಹನುಮಂತ ವಿನ್ನರ್ ಆಗಿದ್ದಾರೆ. ಇದರ ನಡುವೆ ಬಿಗ್ಬಾಸ್ ಮನೆಯಲ್ಲಿ ಮಂಜು ಮತ್ತು ಗೌತಮಿ ಜಾಧವ್ ಸ್ನೇಹದ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು. ಇದು ಕೂಡ ಮಂಜು ಪ್ರಶಸ್ತಿ ಗೆಲ್ಲದೇ ಇರುವುದಕ್ಕೆ ಕಾರಣವಾಯಿತು ಎಂದೂ ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ.
ಇದೀಗ ಉಗ್ರಂ ಮಂಜು ಜೊತೆ ಗೌತಮಿ ದಂಪತಿ ಪೋಸ್ ಕೊಟ್ಟಿರುವ ಫೋಟೋ ಶೇರ್ ಮಾಡಿ ಗಾಸಿಪ್ ಹಬ್ಬಿಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ಗೌತಮಿ ಜಾಧವ್, ಅವರ ಪತಿ ಅಭಿಷೇಕ್ ಹಾಗೂ ಮಂಜು ಒಂದೆಡೆ ಸೇರಿದ್ದಾರೆ. ಈ ಮೂವರು ಈವರೆಗೆ ಒಟ್ಟಾಗಿ ಯಾವುದೇ ಫೋಟೋ ತೆಗೆಸಿಕೊಂಡಿರಲಿಲ್ಲ.
ಇದೇ ಮೊದಲ ಬಾರಿಗೆ ಮೂವರು ಒಟ್ಟಾಗಿ ಸೇರಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಎಲ್ಲರ ಮೊಗದಲ್ಲೂ ನಗು ಇದೆ. ಅಭಿಷೇಕ್ ಹೆಗಲಮೇಲೆ ಮಂಜು ಕೈ ಹಾಕಿ ನಿಂತಿದ್ದಾರೆ. ಈ ಮೂಲಕ ಇವರ ಮಧ್ಯೆ ಯಾವುದೇ ಮನಸ್ತಾಪ ಇಲ್ಲ ಅನ್ನೋದು ಸ್ಪಷ್ಟವಾಗಿದೆ.
ಬಿಗ್ ಬಾಸ್’ ಆಟದ ಶುರುವಿನಲ್ಲಿ ಗೌತಮಿ, ಮಂಜು ಹಾಗೂ ಮೋಕ್ಷಿತಾ ಮಧ್ಯೆ ಉತ್ತರ ಗೆಳೆತನವಿತ್ತು. ದಿನ ಕಳೆದಂತೆ ಮಂಜು ಹಾಗೂ ಗೌತಮಿ ಜೊತೆಗೆ ವೈಮನಸ್ಸು ಬೆಳೆದು ಮೋಕ್ಷಿತಾ ಈ ಗುಂಪಿನಿಂದ ಹೊರ ನಡೆದರು. ಮಂಜು ತಮ್ಮನ್ನು ಕುಗ್ಗಿಸುತ್ತಾರೆ ಎಂದು ಮೋಕ್ಷಿತಾ ಹೊರಬಂದರು.
ಆ ನಂತರ ಗೌತಮಿ ಹಾಗೂ ಮಂಜು ಜೊತೆಯಾದರು. ಇವರ ಗೆಳೆತನವನ್ನು ಅನೇಕರು ಆಡಿಕೊಂಡಿದ್ದು ಇದೆ. ಗೌತಮಿ ಹಾಗೂ ಅವರ ಪತಿ ಅಭಿಷೇಕ್ ಮಧ್ಯೆ ಮಂಜು ಪ್ರವೇಶ ಎಂದೆಲ್ಲ ಟ್ರೋಲ್ ಮಾಡಿದ್ದರು. ‘ಆಂಟಿ-ಅಂಕಲ್ ಲವ್ಸ್ಟೋರಿ’ ಎಂದೆಲ್ಲ ಹೀಯಾಳಿಸಿದ್ದರು.