ಮದುವೆಗೆ ಮನೆಯವರ ವಿರೋಧ: ಹುಡುಗಿ ಮನೆ ಎದುರೇ ನೇಣಿಗೆ ಶರಣಾದ ಯುವಕ!

0
Spread the love

ತುಮಕೂರು: ಪ್ರೀತಿಸಿದ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಣೆ ಮಾಡಿದರೆಂದು ಯುವಕನೋರ್ವ ಹುಡುಗಿ ಮನೆ ಮುಂದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ತುಮಕೂರಿನ ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ನಡೆದಿದೆ. ಮಂಜುನಾಥ್ (32) ಮೃತ ದುರ್ದೈವಿಯಾಗಿದ್ದು, ಟಿಟಿ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

Advertisement

ಮಂಜುನಾಥ್ ಪಕ್ಕದ ಮನೆ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇಬ್ಬರು ಮದುವೆಯಾಗಲು ನಿರ್ಧಾರ ಮಾಡಿದರು. ಮಂಜುನಾಥ್‌  ಯುವತಿಯ ಪೋಷಕರ ಬಳಿ ಮದುವೆ ಮಾಡಿಕೊಡುವಂತೆ ಯುವತಿ ಮನೆಯವರನ್ನು ಕೇಳಿದ್ದ. ಆದರೆ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಿಸಿದ್ದರು .

ಇದರಿಂದ ಮನನೊಂದು ತಡರಾತ್ರಿ ಯುವತಿ ಮನೆ ಮುಂದೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಮೃತದೇಹ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here