ಕೊಲೆ ಕೇಸ್‌ನಲ್ಲಿ ಖ್ಯಾತ ನಟಿ ಅರೆಸ್ಟ್: ನಟರ ವಿರುದ್ಧವೂ ದೂರು ದಾಖಲು

0
Spread the love

ಬಾಂಗ್ಲಾದೇಶದ ಖ್ಯಾತ ನಟಿ ನುಸ್ರತ್ ಫಾರಿಯಾ ಅವರನ್ನು ಕೊಲೆ ಕೇಸ್‌ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ನುಸ್ರತ್ ಫಾರಿಯಾ ಅವರನ್ನು ಢಾಕಾದ ಹಜ್ರತ್ ಶಾಜಲಾಲ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ನುಸ್ರತ್ ಅವರನ್ನು ಬಂಧಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

Advertisement

ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಭಾರಿ ಜನಾಂದೋಲನ ನಡೆದಿತ್ತು. ಸರ್ಕಾರದ ವಿರುದ್ಧ ನಡೆದ ಈ ಹೋರಾಟದಲ್ಲಿ ವಿದ್ಯಾರ್ಥಿಗಳು ಮುನ್ನೆಲೆಯಲ್ಲಿದ್ದರು. ಈ ಹೋರಾಟದ ಸಂದರ್ಭದಲ್ಲಿ ನಟಿ ನುಸ್ರತ್ ಫಾರಿಯಾ ಮತ್ತು ಇನ್ನೂ ಕೆಲವು ನಟರುಗಳು ವಿದ್ಯಾರ್ಥಿಯೊಬ್ಬನನ್ನು ಹತ್ಯೆ ಮಾಡಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ಪ್ರಕರಣದಲ್ಲಿ ನಟಿ ನುಸ್ರತ್ ಅನ್ನು ಬಂಧಿಸಲಾಗಿದ್ದು, ಇನ್ನೂ 17 ಮಂದಿ ಇತರ ನಟರ ವಿರುದ್ಧ ಪ್ರಕರಣ ದಾಖಲಾಗಿದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ಬಾಂಗ್ಲಾದೇಶದಾದ್ಯಂತ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವಾಗ ಢಾಕಾದ ವಾತ್ರಾ ಏರಿಯಾನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಲಾಗಿದ್ದು, ಆತನ ಹತ್ಯೆಗೆ ಯತ್ನಿಸಲಾಗಿತ್ತು ಎಂದು ದೂರು ದಾಖಲಾಗಿತ್ತು. ಆ ಪ್ರಕರಣ ಕುರಿತು ಇತ್ತೀಚೆಗಷ್ಟೆ ಢಾಕಾ ನ್ಯಾಯಾಲಯವು ನಟಿ ಹಾಗೂ ಇತರೆ ಕೆಲವು ನಟರ ವಿರುದ್ಧ ತನಿಖೆಗೆ ಅನುಮತಿ ನೀಡಿತ್ತು, ಅದರ ಬೆನ್ನಲ್ಲೆ ನಟಿ ನುಸ್ರತ್ ದೇಶಬಿಟ್ಟು ಹೋಗುವ ಯತ್ನದಲ್ಲಿದ್ದಾಗ ಅವರ ಬಂಧನ ಆಗಿದೆ.

ನುಸ್ರತ್ ಅವರು ಆಶಿಕಿ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಅವರು ಅಂಕುಶ್ ಹಜ್ರಾ ಅವರೊಂದಿಗೆ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು.ಅವರು ಹೀರೋ 420 (2016), ಬಾದ್ಶಾ – ದಿ ಡಾನ್ (2016), ಪ್ರೇಮಿ ಓ ಪ್ರೇಮಿ (2017) ಮತ್ತು ಬಾಸ್ 2: ಬ್ಯಾಕ್ ಟು ರೂಲ್ (2017) ನಂತಹ ಹಲವಾರು ಹಿಟ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here