ಹಿಂದಿಯ ಪ್ರಸಿದ್ಧ ಕಾಮಿಡಿಯನ್ ಕಪಿಲ್ ಶರ್ಮಾ ಒಡೆತನದ ಕೆಫೆ ಮೇಲೆ ಗುಂಡಿನ ದಾಳಿ ನಡೆದಿದೆ. ಕಪಿಲ್ ಶರ್ಮಾ ಇತ್ತೀಚೆಗೆ ಕೆನಡಾದ ಸರ್ರೆ ನಗರದಲ್ಲಿ ಓಪನ್ ಮಾಡಿರುವ ಕೆಫೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕಾರಿನಲ್ಲಿ ಬಂದ ಆಗಂತುಕರು ಕೆಫೆ ಮೇಲೆ ದಾಳಿ ಮಾಡಿ ಕ್ಷಣಾರ್ಧದಲ್ಲೇ ಎಸ್ಕೇಪ್ ಆಗಿದ್ದಾರೆ. ಗುಂಡಿನ ದಾಳಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾಎರೆ. ಕಪಿಲ್ ಶರ್ಮಾ ಕಳೆದ ವಾರದಲ್ಲೇ ಕೆನಡಾದ ಸರ್ರೆ ನಗರದಲ್ಲಿ ಕ್ಯಾಪ್ಸ್ ಕೆಫೆ ಹೆಸರಿನ ಕೆಫೆ ಓಪನ್ ಮಾಡಿದ್ದರು.
ಈ ದಾಳಿಯ ಹೊಣೆಯನ್ನು ಬಬ್ಬರ್ ಖಾಲ್ಸಾ ಸಂಘಟನೆ ಹೊತ್ತುಕೊಂಡಿದೆ. ಇದು ಭಾರತದ ತನಿಖಾ ಸಂಸ್ಥೆ ಎನ್ಐಎ ಮೋಸ್ಟ್ ವಾಂಟೆಡ್ ಉಗ್ರ ಬಬ್ಬರ್ ಖಾಲ್ಸಾ ಸಂಘಟನೆಯ ಹರ್ಜಿತ್ ಸಿಂಗ್ ಲಡ್ಡಿ ಹೊಣೆ ಹೊತ್ತುಕೊಂಡಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟು ಈ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.