ಬಾಲಿವುಡ್ ಗಾಯಕ ಸೋನು ನಿಗಮ್ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುಣೆ ಲೈವ್ ಕಾನ್ಸರ್ಟ್‌ನಿಂದಲೇ ಸೋನು ನಿಗಮ್ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲೈವ್ ಫರ್ಫಾಮೆನ್ಸ್ ವೇಳೆ ತೀವ್ರ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋನು ನಿಗಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ತಾವು ಯಾವ ರೀತಿ ನೋವು ಅನುಭವಿಸಿದೆ ಅನ್ನೋ ವಿಡಿಯೋವನ್ನು ಸೋನು ನಿಗಮ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪುಣೆಯಲ್ಲಿ ಲೈವ್ ಕಾರ್ಯಕ್ರಮದ ವೇಳೆ ಸೋನು ನಿಗಮ್ ಅವರಿಗೆ ಬೆನ್ನು ನೋವು ಶುರುವಾಗಿದೆ. ಆದರೆ ನೋವನ್ನು ತಡೆದುಕೊಂಡ ಗಾಯಕ ತಮ್ಮ ಗಾಯನ ಮುಂದುವರೆಸಿದ್ದಾರೆ. ಆದರೆ, ಹೋಗ್ತಾ ಹೋಗ್ತಾ ಆ ನೋವು ಉಲ್ಬಣಗೊಂಡಿದೆ. ಅದರಿಂದ ನಡೆಯೋಕು ಸಾಧ್ಯವೇ ಆಗದಂತೆ ಸ್ಥಿತಿ ಉಂಟಾಗಿದೆ. ಕಾರ್ಯ್ಕರಮ ಮುಗಿಯುತ್ತಿದ್ದಂತೆ ಸೋನು ನಿಮಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ನನ್ನ ಜೀವನದ ಅತ್ಯಂತ ಕಷ್ಟದ ದಿನ. ನಾನು ಹಾಡು ಹೇಳುತ್ತಾ, ವೇದಿಕೆ ಮೇಲೆಲ್ಲ ಓಡಾಡುತ್ತಾ ಇದ್ದೆ. ಆಗ ನೋವು ಕಾಣಿಸಿಕೊಂಡಿತು. ಆದರೆ, ಹೇಗೋ ಮ್ಯಾನೇಜ್ ಮಾಡಿದೆ. ಜನರು ನನ್ನಿಂದ ಎಷ್ಟನ್ನು ನಿರೀಕ್ಷಿಸುತ್ತಾರೋ ಅದಕ್ಕಿಂತ ಕಡಿಮೆ ಕೊಡಲು ನನಗೆ ಇಷ್ಟ ಇಲ್ಲ’ ಎಂದು ಸೋನು ನಿಗಮ್ ಹೇಳಿದ್ದಾರೆ.
‘ಅತಿಯಾದ ನೋವು ಕಾಣಿಸಿತ್ತು. ನನ್ನ ಬೆನ್ನು ಹುರಿಗೆ ಯಾರೋ ಇಂಜೆಕ್ಷನ್ ಸೂಜಿ ಇಟ್ಟಿದ್ದಾರೆ ಅನಿಸುತ್ತಿತ್ತು. ಸ್ವಲ್ಪ ಅಲ್ಲಾಡಿದರೂ ನೋವು ಕಿತ್ತು ಬರುತ್ತಿತ್ತು’ ಎಂದು ಅವರು ಹೇಳಿರೋ ಸೋನು ನಿಮಗ್ ವಿಡಿಯೋ ಕ್ಯಾಪ್ಶನ್ನಲ್ಲಿ ‘ರಾತ್ರಿ ಸರಸ್ವತಿ ನನ್ನ ಕೈ ಹಿಡಿದರು’ ಎಂದು ಬರೆದುಕೊಂಡಿದ್ದಾರೆ.
ಪುಣೆಯಲ್ಲಿ ಸೋನು ನಿಗಮ್ ಲೈವ್ ಕಾನ್ಸರ್ಟ್ ಮಾಡುತ್ತಿದ್ದರು. ಜನ ಕೂಡ ಸಾಕಷ್ಟು ಸೇರಿದ್ದರು. ತುಂಬಾನೆ ಜೋಶ್ ಅಲ್ಲಿ ಎಂದಿನಂತೆ ಸೋನು ನಿಗಮ್ ಸಖತ್ ಆಗಿಯೇ ಎಂಟ್ರಿ ಕೊಟ್ಟು ಹಾಡಿ ಕುಣಿದು ಕುಪ್ಪಳಿಸಿದ್ದಾರೆ. ಆ ಬಳಿಕ ಬೆನ್ನು ನೋವು ಹೆಚ್ಚಾಗಿದೆ.